ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ದಿನಗಳ ಹಿಂದೆ ನಟ ನಾಗಚೈತನ್ಯ ನಟಿ ಸೋಭಿತಾ ಧುಲಿಪಾಲ ಜೊತೆ ಎಂಗೇಜ್ ಆಗಿದ್ದಾರೆ. ಇದರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ಫೋಟೊಗಳನ್ನು ನೋಡಿದ ಫ್ಯಾನ್ಸ್ ಇನ್ನೂ ಸಮಂತಾರನ್ನು ಮರೆತ ಹಾಗೆ ಕಾಣಿಸ್ತಿಲ್ಲ.
ಎಲ್ಲೋ ಬೆರಳೆಣಿಕೆಯಷ್ಟು ಜನ ಮಾತ್ರ ಕಂಗ್ರಾಟ್ಸ್ ಎಂದು ಹೇಳಿದ್ದಾರೆ. ಆದರೆ ಉಳಿದವರು ಸಮಂತಾರನ್ನು ಕಳ್ಕೊಂಡ್ರಿ, ನಿಮ್ಮ ಜೋಡಿ ಬೆಸ್ಟ್ ಎಂದು ಹೇಳಿದ್ದಾರೆ. ಇದರ ಜೊತೆಗೆ ನಾಗಚೈತನ್ಯ ಅಕೌಂಟ್‌ನಲ್ಲಿ ಸಮಂತಾ ಜೊತೆಗಿನ ಫೋಟೊ ಒಂದನ್ನು ಅಪ್‌ಲೋಡ್ ಮಾಡಲಾಗಿದೆ.
ಅದರಲ್ಲಿ ಸಮಂತಾ ಹಾಗೂ ನಾಗಚೈತನ್ಯ ಮತ್ತು ಅವರ ಕಾರ್ ಇದೆ, ಅದಕ್ಕೆ ನಾಗಚೈತನ್ಯ ಮಿಸರ್ಸ್ ಮತ್ತು ಗರ್ಲ್‌ಫ್ರೆಂಡ್ ಎನ್ನುವ ಕ್ಯಾಪ್ಷನ್ ಹಾಕಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಸಿಟ್ಟಾಗಿದ್ದಾರೆ. ಸಮಂತಾಳನ್ನು ವಜ್ರವನ್ನು ಸೋಭಿತಾರಂತ ಚಿನ್ನಕ್ಕಾಗಿ ಕಳೆದುಕೊಂಡಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ.
View this post on Instagram