ಕಾಫಿ ಡೇ ಸಿದ್ಧಾರ್ಥ್‌ ಆತ್ಮಹತ್ಯೆ ಹಿಂದೆ ಡಿಕೆಶಿ ಕೈವಾಡ: ಕುಮಾರಸ್ವಾಮಿ ಆರೋಪಕ್ಕೆ ಡಿಕೆ ಶಿವಕುಮಾರ್‌ ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್‌ ಅವರ ಸಾವಿಗೆ ಡಿಕೆ ಶಿವಕುಮಾರ್‌ ಅವರೇ ಕಾರಣ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಆರೋಪಕ್ಕೆ ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದು, ಅಯ್ಯೋ ..‌ ಕುಮಾರಸ್ವಾಮಿಯನ್ನ ಹುಚ್ಚಾಸ್ಪತ್ರೆಗೆ ಸೇರಿಸೋಣ. ಅವರ ತಂದೆ ಮೇಲೆ 1985 ರಲ್ಲಿ ವಿಧಾನಸಭೆ ಚುನಾವಣೆಯನ್ನ ನಾನು ಗೆದ್ದಿದ್ದೇನೆ. ಬಂಗಾರಪ್ಪ ಸಂಪುಟದಲ್ಲಿ ಮಂತ್ರಿ ಆಗಿದ್ದೇನೆ. ನನ್ನ ಎಸ್ ಎಂ ಕೃಷ್ಣ ಸಂಬಂಧ ಹೇಗಿದೆ ಅಂತಾ ಅವರಿಗೆ ಏನ್‌ ಗೊತ್ತಿದೆ. ಪಾಪಾ ಮೆಂಟಲ್ ಆಗಿದ್ದಾನೆ ಅಂತ ಕಾಣಿಸುತ್ತೆ, ಹಿತೈಷಿಗಳಿಗೋ, ಪಾರ್ಟಿ ಕಾರ್ಯಕರ್ತರಿಗೋ ಅವರನ್ನು ಮೆಂಟಲ್ ಆಸ್ಪತ್ರೆ ಸೇರಿಸಿ ಅಂತ ಹೇಳೋಣ ಎಂದು ಹೇಳಿದ್ದಾರೆ.

ನಾನು ಯಾವ ಬಡವನ ಆಸ್ತಿ ಕಬಳಿಸಿದ್ದೀನಿ ಅಂತ ಕರ್ಕೊಂಡ್ ಬಂದು ನಿಲ್ಲಿಸಿಬಿಡಿ. ಬಡವರಿಗೆ ತೊಂದ್ರೆ ಕೊಟ್ಟಿರೋದು ನನ್ನ ಜಾಯಮಾನದಲ್ಲಿ ಇಲ್ಲ. ಯೋಗೇಶ್ವರ್ ಏನ್ ಬೇಕೋ‌ ಅದನ್ನು ತಿಳಿಸಿದ್ದಾರೆ. ಯೋಗೇಶ್ವರ್ ಅದಕ್ಕೆ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು. ಕುಮಾರಸ್ವಾಮಿ ಮೇಲೆ ಕಣ್ ಹಾಕಿದ್ರೆ ಸರ್ವನಾಶ ಆಗುತ್ತಾರೆ ಎನ್ನುವ ಮಾತಿಗೆ ಟಾಂಗ್‌ ಕೊಟ್ಟ ಡಿಸಿಎಂ, ನನ್ನ ಮೇಲೆ ಕಣ್ಣಾಕಿದ್ರೂ ಅದೇ ಪ್ರಾಬ್ಲಂ ಆಗೋದಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ರಾಜಕೀಯ ಬಂದ ಮೇಲೆ ಡಿಕೆಶಿ ಆಸ್ತಿ ಹೆಚ್ಚಳ ವಿಚಾರಕ್ಕೆ ಮಾತನಾಡಿದ ಅವರು, ‘ಬಡವರು ನಾವು, ಹೊಲ ಉಳ್ಕೊಂಡು ಇದ್ದೆವು. ಸಣ್ಣ ಪಣ್ಣ ಐವತ್ತು ನೂರು ಎಕರೆ ಜಮೀನಿತ್ತು. ನಮ್ಮಪ್ಪ ಬಡವ. ಆದರೆ, ಒಂದು ತಿಳಿದುಕೊಳ್ಳಿ. ಎನ್‌ಪಿಎಸ್ ಸ್ಕೂಲಲ್ಲಿ ಓದಿದವನು ನಾನು. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ನನ್ನ ಇತಿಹಾಸ ಅಲ್ಲಿಂದ ಶುರುವಾಗಿದೆ ಎಂದು ಹೇಳಿದ್ದಾರೆ.

ಮೊದಲಿನಿಂದಲೂ ದೊಡ್ಡ ಸಂಚು ನಡೆಸಿಕೊಂಡು ಬಂದಿದ್ದಾರೆ. ಹಿಂದೆನೂ ಹೇಳಿದ್ದಾರೆ, ಹತ್ತು ತಿಂಗಳಲ್ಲಿ ಸರ್ಕಾರ ತೆಗೀತೀವಿ, ಮಿಲ್ಟ್ರಿ ಬಂದು ಜೈಲಿಗೆ ತಗೊಂಡು ಹೋಗ್ತಿವಿ. ನನ್ನ ತಮ್ಮನ, ನನ್ನ ತಂಗೀನಾ, ನನ್ನ ಹೆಂಡ್ತೀನಾ, ಎಲ್ಲರ ಮೇಲೆ ಕೇಸ್ ಹಾಕಿಸಿರುವ ದಾಖಲೆ ನನ್ನ ಬಳಿ ಇದೆ. ನನ್ನ ಮೇಲೂ ಕೇಸ್ ಹಾಕಿಸಿದ್ದು ದಾಖಲೆ ಇದೆ. ಅವೆಲ್ಲಾ ಮರೆತು ಬಿಟ್ಟು, ನನ್ನ ಪಕ್ಷ ಹೇಳಿತ್ತು ಅಂತಾ ಬೆಂಬಲವಾಗಿ ನಿಂತಿದ್ದೆ. ಮಾತಾಡ್ತಾ ಇದ್ದಾರೆ ಅಂತ ನಾನೂ ತಾಳ್ಮೆಯಿಂದ ಇದ್ದೆ. ಆದರೆ, ಎಲ್ಲದಕ್ಕೂ ಒಂದು ಲಿಮಿಟ್‌ ಅಂತಾ ಇರುತ್ತೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!