ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದರ್ ನಗರ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಕಳವು ಮಾಡಿದ್ದ 1.2 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಭಾಲ್ಕಿ, ಮೇಹಕರ್ ಮತ್ತು ಹುಮ್ನಾಬಾದ್ ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ವಿವಿಧ ಪ್ರಕರಣಗಳು ದಾಖಲಾಗಿವೆ. ಪೊಲೀಸರು 11 ಕಳ್ಳತನ ಪ್ರಕರಣಗಳನ್ನು ಬಯಲಿಗೆಳೆದಿದ್ದು, ಚಿನ್ನ, ಬೆಳ್ಳಿ, ದ್ವಿಚಕ್ರ ವಾಹನಗಳು ಮತ್ತು ಎಮ್ಮೆ ಸೇರಿದಂತೆ 1.2 ಲಕ್ಷ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.
ದೇವಸ್ಥಾನದ ದರೋಡೆ ಪ್ರಕರಣದಲ್ಲಿ ತೆಲಂಗಾಣದಲ್ಲಿ 11 ಗ್ರಾಂ ಬೆಳ್ಳಿ, ಒಂದು ಗ್ರಾಂ ಚಿನ್ನಾಭರಣ ಮತ್ತು 10 ಕದ್ದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಮ್ಮೆ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದ ಮೇಹಕರ್ ಠಾಣೆ ಪೊಲೀಸರು ಸುಮಾರು 7 ಲಕ್ಷ ರೂ. ಮೌಲ್ಯದ ಎಮ್ಮೆ ಜಪ್ತಿ ಮಾಡಲಾಗಿದೆ.