ಹೊಸದಿಗಂತ ಕೊಪ್ಪಳ:
ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಚೈಲ್ ಲಿಂಕ್ ಹಾನಿಯಾಗಿದ್ದ ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ತುಂಗಭದ್ರಾ ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಸೇರಿ ಹಲವರು ಉಪಸ್ಥಿತರಿದ್ದರು.
ಒಂದು ಬೆಳೆಗೆ ನೀರು ಸಿಗುವ ವಿಶ್ವಾಸ: ತಂಗಡಗಿ
ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಿರುವ ಒಟ್ಟು 105 ಟಿಎಂಸಿ ಅಡಿ ನೀರಿನ ಪೈಕಿ ಕನಿಷ್ಠ 61 ಟಿಎಂಸಿ ಅಡಿ ನೀರು ಹೊರಗಡೆ ಬಿಟ್ಟ ಬಳಿಕವೇ ಕೊಚ್ಚಿ ಹೋಗಿರುವ ಕ್ರಸ್ಟ್ ಗೇಟ್ ಜಾಗಕ್ಕೆ ಹೊಸ ಗೇಟ್ ಅಳವಡಿಸಲು ಸಾಧ್ಯ. ಉಳಿಯುವ ನೀರಿನಲ್ಲಿ ಒಂದು ಬೆಳೆಗೆ ಫಸಲು ಬರುವ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ದೇವರ ದಯೆಯಿಂದ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿತ್ತು. ದುರದೃಷ್ಟವಶಾತ್ ಗೇಟ್ ಕೊಚ್ಚಿ ಹೋಗಿ ಇರುವ ನೀರನ್ನು ಅನಿವಾರ್ಯವಾಗಿ ನದಿಗೆ ಹರಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.