2027 ರ ವೇಳೆಗೆ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: IMFನ ಗೀತಾ ಗೋಪಿನಾಥ್ ಭರವಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ 2027 ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಉಪ ವ್ಯವಸ್ಥಾಪಕ ನಿರ್ದೇಶಕಿ ಡಾ. ಗೀತಾ ಗೋಪಿನಾಥ್ ಹೇಳಿದ್ದಾರೆ.

ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಅವರು , ಭಾರತದ ಬೆಳವಣಿಗೆಯು ಕಳೆದ ಹಣಕಾಸು ವರ್ಷದಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿ ಸಾಗಿದೆ. ಅದೇ ರೀತಿಯ ಪರಿಣಾಮಗಳು ಮುಂದಿನ ಹಲವು ವರ್ಷಗಳವರೆಗೆ ಸಾಗಲಿದೆ. ಈ ವರ್ಷದ ಮುನ್ಸೂಚನೆಯೂ ಪರಿಣಾಮ ಬೀರುತ್ತಿವೆ. ಮತ್ತೊಂದು ಅಂಶವೆಂದರೆ ಖಾಸಗಿ ಉದ್ಯಮಗಳು ಚೇತರಿಸಿಕೊಳ್ಳುತ್ತಿರುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದು ಗೋಪಿನಾಥ್ ಹೇಳಿದ್ದಾರೆ.

ಎಫ್ಎಂಸಿಜಿ ಮತ್ತು ದ್ವಿಚಕ್ರ ವಾಹನ ಮಾರಾಟದ ಹೊಸ ಅಂಕಿ ಅಂಶಗಳು ಮತ್ತು ಅನುಕೂಲಕರವಾಗಿ ಮಾನ್ಸೂನ್ ಮಳೆ ಸುರಿದಿರುವ ಆಧಾರದ ಮೇಲೆ, 2024-25ರ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು 7% ಕ್ಕೆ ಐಎಂಎಫ್ ನಿರೀಕ್ಷಿಸಿದೆ. ಇದು ಆರ್ಥಿಕ ಸಮೀಕ್ಷೆಯಲ್ಲಿ ಕೇಂದ್ರ ಸರ್ಕಾರ ನೀಡಿದ 6.5% ಅಂದಾಜಿಗಿಂತ ಹೆಚ್ಚಿನ ಅಂಕಿ ಅಂಶವಾಗಿದೆ. 2027 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಐಎಂಎಫ್ ಭವಿಷ್ಯ ನುಡಿದಿದೆ.

ಗ್ರಾಮೀಣ ಬಳಕೆಯ ಚೇತರಿಕೆಯಿಂದ ಅದು ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ನೀವು ದ್ವಿಚಕ್ರ ವಾಹನ ಮಾರಾಟ ಪ್ರಗತಿ ನೋಡಿದರೆ ಆಟೋಮೊಬೈಲ್ ಕ್ಷೇತ್ರವೂ ಉತ್ತಮವಾಗಿದೆ. ಉತ್ತಮ ಮಾನ್ಸೂನ್ ಮಳೆ ಬಿದ್ದರೆ ಉತ್ತಮ ಫಸಲನ್ನು ನೋಡಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಕೃಷಿ ಆದಾಯವು ಹೆಚ್ಚುತ್ತಿರುವುದರಿಂದ, ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚೇತರಿಕೆಯನ್ನು ನೋಡಬಹುದು ಎಂದು ಹೇಳಿದ ಗೋಪಿನಾಥ್, 2024-25ರ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು 7% ಕ್ಕೆ ಹೆಚ್ಚಿಸಲಾಗಿದೆ ಎಂದು ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!