ಬಿಹಾರದಲ್ಲಿ 3ನೇ ಬಾರಿಗೆ ಕುಸಿದ ಸೇತುವೆ, ನಿರ್ಮಾಣ ಸಂಸ್ಥೆಗೆ ನಿತೀಶ್ ಸರ್ಕಾರ ಕ್ಲಾಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಹಾರದಲ್ಲಿ ಮತ್ತೊಂದು ನಿರ್ಮಾಣ ಹಂತದ ಸೇತುವೆ ಕುಸಿದಿದ್ದು, ಒಂದೇ ಸೇತುವೆ ಮೂರನೇ ಬಾರಿ ಕುಸಿದಿದ್ದು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಬಿಹಾರದ ಸುಲ್ತಾನ್ ಗಂಜ್ ಮತ್ತು ಅಗುವಾನಿ ಘಾಟ್ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲ್ವಿನ್ಯಾಸದ ಒಂದು ಭಾಗ ಕುಸಿದು ಗಂಗಾ ನದಿಗೆ ಬಿದ್ದಿದೆ.

ಈ ಸೇತುವೆಯನ್ನು ಕಳೆದ 9 ವರ್ಷಗಳಿಂದ ನಿರ್ಮಾಣ ಮಾಡಲಾಗುತ್ತಿದ್ದು, ಇದೀಗ ಸೇತುವೆಯ ಒಂದು ಭಾಗದ ಮೇಲ್ಛಾವಣಿ ಕುಸಿದುಬಿದ್ದಿದೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಸಾವು-ನೋವುಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ಸೇತುವೆ ಕುಸಿಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ 9 ವರ್ಷಗಳಿಂದ ಈ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಒಂದಲ್ಲ ಒಂದು ಭಾಗದಲ್ಲಿ ವಿವಿಧ ಕಾರಣಗಳಿಂದ ಈ ವರೆಗೂ ಮೂರು ಬಾರಿ ಸೇತುವೆ ವಿವಿಧ ಭಾಗಗಳು ಕುಸಿದಿವೆ. ಈ ಹಿಂದೆ ಜೂನ್ 4, 2023 ರಂದು ಇದೇ ಸೇತುವೆಯ ಒಂದು ಭಾಗ ಕುಸಿದಿತ್ತು. ಖಗಾರಿಯಾ ಭಾಗದಲ್ಲಿ ಪಿಲ್ಲರ್ ಸಂಖ್ಯೆ 10 ಮತ್ತು 12 ರ ನಡುವಿನ ಭಾಗ ಕುಸಿದು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!