ಹೊಸದಿಗಂತ ಡಿಜಿಟಲ್ ಡೆಸ್ಕ್:
ಹ್ಯಾಂಡ್‌ಬ್ರೇಕ್ ಹಾಕದೆ ಲಾರಿ ನಿಲ್ಲಿಸಿ ಹೋಗಿದ್ದ ಡ್ರೈವರ್‌ನ ಅಜಾಗರೂಕತೆಯಿಂದ ಮಗು ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಹೊಸ ಗುಡ್ಡದಹಳ್ಳಿಯಲ್ಲಿ ದುರ್ಘಟನೆ ನಡೆದಿದೆ. ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಹರಿದ ಪರಿಣಾಮ ಮಗು ಹಾಗೂ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಾಲೋಬ್ಲಾಕ್ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಚಾಲಕ ರಸ್ತೆಬದಿ ನಿಲ್ಲಿಸಿ ಹೋಗಿದ್ದ. ನಿಲ್ಲಿಸುವಾಗ ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ. ಏಕಾಏಕಿ ಚಲಿಸಿದ ಟಿಪ್ಪರ್ ಲಾರಿ ರಸ್ತೆಬದಿ ನಡೆದು ಹೋಗುತ್ತಿದ್ದ ಮಗು ಹಾಗೂ ವ್ಯಕ್ತಿ ಮೇಲೆ ಹರಿದಿದೆ. ಮಗು ಲಾರಿಯ ಚಕ್ರಕ್ಕೆ ಸಿಲುಕಿ ದೇಹ ಛಿದ್ರವಾಗಿದ್ದು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ವೇಳೆ ಟಿಪ್ಪರ್ ಲಾರಿ 8 ಬೈಕ್ ಗಳು ಮತ್ತು ಎರಡು ಕಾರುಗಳಿಗೆ ಗುದ್ದಿದ್ದು ವಾಹನಗಳು ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.