ಅಮೆರಿಕದಲ್ಲಿ ಭೀಕರ ಕಾರು ಅಪಘಾತ: ಭಾರತೀಯ ಮೂಲದ ದಂಪತಿ, ಮಗಳು ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಟೆಕ್ಸಾಸ್‌ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಲಿಯಾಂಡರ್ ನಿವಾಸಿಗಳಾದ ಅರವಿಂದ್ ಮಣಿ(45), ಅವರ ಪತ್ನಿ ಪ್ರದೀಪಾ ಅರವಿಂದ್(40), ಮತ್ತು ಅವರ 17 ವರ್ಷದ ಮಗಳು ಆಂಡ್ರಿಲ್ ಅರವಿಂದ್, ಲ್ಯಾಂಪಾಸ್ ಕೌಂಟಿ ಬಳಿ ಬುಧವಾರ ಬೆಳಿಗ್ಗೆ 5.45 ರ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ದಂಪತಿ 14 ವರ್ಷದ ಮಗ ಆದಿರ್ಯಾನ್ ಘಟನೆ ಸಂದರ್ಭದಲ್ಲಿ ಜೊತೆಯಲ್ಲಿರಲಿಲ್ಲ. ಅಪ್ಪ, ಅಮ್ಮ ಮತ್ತು ಅಕ್ಕನನ್ನು ಕಳೆದುಕೊಂಡು ಪುಟ್ಟ ಬಾಲಕ ಅನಾಥನಾಗಿದ್ದಾನೆ.

ಇನ್ನು GoFundMe ಎಂಬ ಸಾಮಾಜಿಕ ಜಾಲತಾಣ ಪೇಜ್‌ ಬಾಲಕನಿಗೆ ನಿಧಿ ಸಂಗ್ರಹಿಸಿದೆ. ಇದುವರೆಗೆ ಏಳು ಲಕ್ಷ ಡಾಲರ್‌ಗೂ ಅಧಿಕ ಹಣ ಸಂಗ್ರಹವಾಗಿದೆ.

ಈ ದುರ್ಘಟನೆಯಲ್ಲಿ ಭಾರತೀಯ ಮೂಲದ ಕುಟುಂಬದ ವಾಹನಕ್ಕೆ ಡಿಕ್ಕಿ ಹೊಡೆದ ಕಾರಿನ ಚಾಲಕ ಸೇರಿದಂತೆ ಒಟ್ಟು ಐದು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬದುಕುಳಿಯುವ ಯಾವುದೇ ಅವಕಾಶವಿರಲಿಲ್ಲ. ಇದು 26 ವರ್ಷಗಳಲ್ಲಿ ನಾನು ನೋಡಿದ ಅತ್ಯಂತ ಭೀಕರ ಅಪಘಾತಗಳಲ್ಲಿ ಒಂದಾಗಿದೆ. ದಂಪತಿ ಇದ್ದ ಕಾರಿಗೆ ಡಿಕ್ಕಿ ಹೊಡೆದ ಕಾರಿನ ಚಾಲನೆಯು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!