ʼಸಾರ್‌ ಎದ್ದೇಳಿ ಸಾರ್‌, ಎದ್ದೇಳಿ..ʼ ಎಣ್ಣೆ ಹೊಡೆದು ಕ್ಲಾಸ್‌ನಲ್ಲಿ ಮಲಗಿದ್ದ ಶಿಕ್ಷಕನನ್ನು ಎಬ್ಬಿಸಿದ ಮಕ್ಕಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಾಠ ಮಾಡುವ ಶಿಕ್ಷಕನೇ ಕಂಠಪೂರ್ತಿ ಕುಡಿದು ಶಾಲೆಯಲ್ಲಿ ನಿದ್ದೆ ಹೊಡೆದ್ರೆ! ಹೌದು, ಶಿಕ್ಷಕನೊಬ್ಬ ಫುಲ್ ಟೈಟ್ ಆಗಿ ತರಗತಿಯಲ್ಲಿ ನಿದ್ದೆಗೆ ಜಾರಿದ್ದಾನೆ. ಮಕ್ಕಳೆಲ್ಲ ತಮ್ಮ ಶಿಕ್ಷಕರನ್ನು ಎಬ್ಬಿಸೋಕೆ ಟ್ರೈ ಮಾಡ್ತಿದ್ದಾರೆ. ಆದರೂ ಶಿಕ್ಷಕ ಮೈಮೇಲೆ ಪ್ರಜ್ಞೆ ಇಲ್ಲದವನಂತೆ ಮಲಗಿದ್ದಾರೆ.

ಶಿಕ್ಷಕರೊಬ್ಬರು ಫುಲ್ ಟೈಟಾಗಿ ತರಗತಿಗೆ ಬಂದು ನಿದ್ದೆಗೆ ಜಾರಿದ್ದಾರೆ. ಇತ್ತ ವಿದ್ಯಾರ್ಥಿಗಳು ಆ ಶಿಕ್ಷಕನನ್ನು ಸುತ್ತುವರೆದಿದ್ದು ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಈ ಘಟನೆಯೂ ಅಸ್ಸಾಂನ ಕಾಮಾಖ್ಯ ನಗರದ ಶಾಲೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ವಿಡಿಯೋದಲ್ಲಿ ಶಿಕ್ಷಕ ಕುರ್ಚಿಯ ಮೇಲೆ ಮಲಗಿರುವುದನ್ನು ಕಾಣಬಹುದು. ಆತನ ಸುತ್ತ ವಿದ್ಯಾರ್ಥಿಗಳು ಸೇರಿದ್ದು, ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳು ಎಷ್ಟೇ ತಳ್ಳಾಡಿದರೂ ಕೂಡ ಆತನು ಎದ್ದೇಳುತ್ತಿಲ್ಲ. ಇತ್ತ ಅಧ್ಯಾಪಕರು ಕೂಡ ಪ್ರಯತ್ನಿಸಿದ್ದು ಶಿಕ್ಷಕನು ಕುಡಿದ ನಶೆಯಲ್ಲಿ ಗಾಢವಾದ ನಿದ್ರೆಗೆ ಜಾರಿರುವುದನ್ನು ಕಾಣಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!