ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಉದ್ದಿನಬೇಳೆ ಹಾಕಿ
ನಂತರ ಸಣ್ಣದಾಗಿ ಕತ್ತರಿಸಿದ ಶುಂಠಿ ಹಾಕಿ ಬಾಡಿಸಿ
ನಂತರ ಹಸಿಮೆಣಸಿನ ಕಾಯಿ ಹಾಕಿ
ನಂತರ ಅದಕ್ಕೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಮಿಕ್ಸ್ ಮಾಡಿ, ಉಪ್ಪು ಹಾಗೂ ಅರಿಶಿಣ ಪುಡಿ ಹಾಕಿ
ನಂತರ ಗರಂ ಮಸಾಲಾ ಹಾಕಿ, ಬೇಕಿದ್ದಲ್ಲಿ ಟೊಮ್ಯಾಟೊ ಹಾಕಿ
ನಂತರ ಒಂದು ಲೋಟ ರವೆಗೆ ಮೂರು ಲೋಟ ನೀರಿನ ಲೆಕ್ಕಕ್ಕೆ ನೀರು ಹಾಕಿ ಕುದಿಸಿ
ಕುದಿಯುವಾಗ ಕಾಯಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ
ನಂತರ ಹುರಿದು ತಣ್ಣಗಾದ ಚಿರೋಟಿ ರವೆ ಸೇರಿಸಿ ಮಿಕ್ಸ್ ಮಾಡಿ
ಸಣ್ಣ ಉರಿಯಲ್ಲಿ ಐದು ನಿಮಿಷ ಬೇಯಿಸಿ ನಂತರ ಒಂದು ಸ್ಪೂನ್ ತುಪ್ಪ ಹಾಕಿ
ನಂತರ ಮತ್ತೆ ಸಣ್ಣ ಉರಿಯಲ್ಲಿ ಬೇಯಿಸಿ ಆಫ್ ಮಾಡಿ ತಿನ್ನಿ