ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಶುಕ್ರವಾರ ಇಳಿಕೆ ಕಂಡಿವೆ. ಚಿನ್ನದ ಬೆಲೆ ಗ್ರಾಮ್ಗೆ 10 ರೂನಷ್ಟು ಇಳಿಕೆ ಆಗಿದೆ. ಅಪರಂಜಿ ಚಿನ್ನ ಮತ್ತು ಆಭರಣ ಚಿನ್ನಗಳೆರಡರ ಬೆಲೆಯೂ ಸಮವಾಗಿ ಇಳಿದಿವೆ. ಬೆಳ್ಳಿ ಬೆಲೆ ಮುಂಬೈ ಮೊದಲಾದ ಕೆಲವೆಡೆ ಗ್ರಾಮ್ಗೆ 10 ಪೈಸೆಯಷ್ಟು ಕಡಿಮೆ ಆಗಿದೆ.
ಬೆಂಗಳೂರಿನಲ್ಲಿ ಗ್ರಾಮ್ಗೆ 83 ರೂ ಇದ್ದ ಬೆಲೆ ಇಂದು 87 ರು ಗಡಿ ದಾಟಿದೆ. ಆದರೆ, ಮುಂಬೈಗಿಂತಲೂ ಬೆಲೆ ತುಸು ಕಡಿಮೆ. ಚೆನ್ನೈ, ಕೇರಳ ಮೊದಲಾದೆಡೆ ಬೆಳ್ಳಿ ಬೆಲೆ 93.50 ರೂ ಇದ್ದದ್ದು 93 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 67,050 ರುಪಾಯಿ ಇದೆ.
24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,150 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,840 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 67,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,750 ರುಪಾಯಿಯಲ್ಲಿ ಇದೆ.