ಬೀಡಿ, ಸಿಗರೇಟ್‌ ಕೊಡುವವರೆಗೂ ತಿಂಡಿ ತಿನ್ನಲ್ಲ.. ಹಿಂಡಲಗಾ ಜೈಲಿನಲ್ಲಿ ಕೈದಿಗಳ ಪ್ರೊಟೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ಕೊಡುತ್ತಿದ್ದ ಫೋಟೊಗಳು ವೈರಲ್‌ ಆದಂತೆ, ರಾಜ್ಯದ ಎಲ್ಲ ಜೈಲುಗಳಲ್ಲಿ ಸ್ಟ್ರಿಕ್ಟ್‌ ರೂಲ್ಸ್‌ ಜಾರಿಯಾಗಿದೆ. ಬಿಡಿ ಸಿಗರೇಟ್‌ ಇತರ ವಿಷಯಗಳಿಗೆ ಬ್ರೇಕ್‌ ಬಿದ್ದಿದ್ದು, ಕೈದಿಗಳು ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದಾರೆ.

ಬೀಡಿ, ಸಿಗರೇಟ್, ತಂಬಾಕು ನೀಡುವಂತೆ ಖೈದಿಗಳು ಬೆಳಗಿನ ಉಪಾಹಾರ ತಿರಸ್ಕರಿಸಿ ಪ್ರತಿಭಟನೆ ನಡೆಸಿದರು. ಬೀಡಿ, ಸಿಗರೇಟ್ ತಂಬಾಕು ಕೊಡುವವರಗೆ ನಾವು ತಿಂಡಿ, ಊಟ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ  ಎನ್ನಲಾಗಿದೆ.

ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ನಟ ದರ್ಶನ್​ಗೆ ರಾಜಾತಿಥ್ಯ ದೊರೆಯುತ್ತಿರುವ ಫೋಟೋ ಹೊರ ಬರುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚತ್ತಿದ್ದು, ಕೂಡಲೆ ಒಂಬತ್ತು ಅಧಿಕಾರಿಗಳನ್ನು ಅಮಾನತು ಮಾಡಿದೆ. ಅಲ್ಲದೇ, ದರ್ಶನ್​​ರನ್ನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್​​ ಮಾಡಲಾಗಿದೆ. ಮತ್ತು ದರ್ಶನ್​ ಚಹಚರರನ್ನು ರಾಜ್ಯ ವಿವಿಧ ಕೇಂದ್ರ ಕಾರಾಗೃಹಗಳಿಗೆ ಶಿಫ್ಟ್​ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!