ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ವರು ಯುವಕರಿಂದ ಪ್ರೀತಿ, ಪ್ರೇಮದ ಅಪಪ್ರಚಾರ ಹಾಗೂ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಡ್ಯದ ಹನಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಇಂಪನಾ (14) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ಗಗನ್, ಸಂಜಯ್ ,ಮಹೇಂದ್ರ ಹಾಗೂ ಲೋಹಿತ್ ಎಂಬ ಯುವಕರಿಂದ ಕಿರುಕುಳದ ಆರೋಪ ಕೇಳಿ ಬಂದಿದೆ. ಹನಕೆರೆ ಗ್ರಾಮದ ಗಗನ್ ಮತ್ತು ಸ್ನೇಹಿತರು ಸೇರಿ ಇಂಪನಾ- ಮಹೇಂದ್ರ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದು ಗಾಳಿ ಸುದ್ದಿ ಹಬ್ಬಿಸಿದ್ದರು.
ಅಲ್ಲದೆ ಆಕೆ ಮಾತಾಡುವುದನ್ನು ರೆಕಾರ್ಡ್ ಮಾಡಿಕೊಂಡು ವೈರಲ್ ಮಾಡಿದ್ದರು. ಇದರಿಂದ ಬೇಸತ್ತ ಇಂಪನಾ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದೇ ಗ್ರಾಮದ ಖಾಸಗಿ ಶಾಲೆಯಲ್ಲಿ ಇಂಪನಾ 9ನೇ ತರಗತಿ ಓದುತ್ತಿದ್ದಳು.
ಮಕ್ಕಳು ಓದಿ, ಉತ್ತಮ ಕೆಲಸ ತೆಗೆದುಕೊಂಡು ಅತ್ಯುತ್ತಮ ಜೀವನ ನಡೆಸಲಿ ಎಂದು ಆಸೆಪಟ್ಟಿದ್ದ ಪೋಷಕರಿಗೆ ಯಾವುದೋ ಸಿಲ್ಲಿ ಕಾರಣಕ್ಕಾಗಿ ಮಗಳು ಸತ್ತಿದ್ದಾಳೆ ಎನ್ನುವ ಸತ್ಯವನ್ನು ಅರಗಿಸಿಕೊಳ್ಳುವಂತಾಗಿದೆ. ಯುವಪೀಳಿಗೆ ಇಲ್ಲಿ ಗಮನಿಸಿ, ಅಪಪ್ರಚಾರ ಅಥವಾ ಯಾರದ್ದೇ ಮಾತುನಿಮಗೆ ನೋವಾದರೆ ಒಂದು ದಿನ ಸಹಿಸಿಕೊಳ್ಳಿ, ಇನ್ನಷ್ಟು ಗಟ್ಟಿಯಾಗುತ್ತೀರಿ. ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಪೋಷಕರ ಸಹಾಯ ಪಡೆಯಿರಿ..