ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತಾ ವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಬಿಐ ಇದೀಗ ಆಸ್ಪತ್ರೆ ನಿವೃತ್ತ ಪ್ರಿನ್ಸಿಪಾಲ್ ಸಂದೀಪ್ ಘೋಷ್ ಬಂಧಿಸಿದೆ.
|
ಹಲವು ಸುತ್ತಿನ ವಿಚಾರಣೆ ಬಳಿಕ ಇದೀಗ ಸಂದೀಪ್ ಬಂಧನವಾಗಿದೆ. ಘಟನೆ ನಡೆದ 15 ದಿನ ಸಿಬಿಐ ಸಾಲ್ಟ್ ಲೇಕ್ ಕಚೇರಿಯಲ್ಲಿ ವಿಚಾರಣೆ ನಡೆಸಿದ ಅಧಿಕಾರಿಗಳು, ಸಂದೀಪ್ ಘೋಷ್ ಬಂಧಿಸಿರುವ ಮಾಹಿತಿಯನ್ನು ನೀಡಿದ್ದಾರೆ.
ಸಂದೀಪ್ ಘೋಷ್ ವಿರುದ್ಧ ಸಿಬಿಐ ಅಧಿಕಾರಿಗಳು ಐಪಿಸಿ ಸೆಕ್ಷನ್ 120ಬಿ, ಸೆಕ್ಷನ್ 420 ಹಾಗೂ 1988ರ ಭ್ರಷ್ಟಾಚಾರ ವಿರೋಧಿ ಕಾಯ್ದೆಯ ಸೆಕ್ಷನ್ 7ರ ಅಡಿ ಪ್ರಕರಣ ದಾಖಲಿಸಿದೆ. ಸಿಬಿಐ ದಾಖಲಿಸಿರುವ ಸೆಕ್ಷನ್ ಅಡಿಯಲ್ಲಿ ಸಂದೀಪ್ ಘೋಷ್ಗೆ ಜಾಮೀನು ರಹಿತ ಪ್ರಕರಣಗಳು ದಾಖಲಾಗಿದೆ.
ಇತ್ತ ಸಂದೀಪ್ ಘೋಷ್ ಬಂದನ ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಸರ್ಕಾರದ ಸಂಕಷ್ಟ ಹೆಚ್ಚಿಸಿದೆ.
ಘಟನೆ ಬೆನ್ನಲ್ಲೇ ಮಮತಾ ಬ್ಯಾನರ್ಜಿ ರಾಜೀನಾಮೆ ಆಗ್ರಹಿಸಿ ಪಶ್ಚಿಮ ಬಂಗಾಳ ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ನಡೆದಿದೆ. ಇದೀಗ ಸಂದೀಪ್ ಘೋಷ್ ಬಂಧನ ಮಮತಾ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿದೆ. ಇತ್ತ ಮಮತಾ ಬ್ಯಾನರ್ಜಿ ನೇತತ್ವದ ಟಿಎಂಸಿ ಕೂಡ ಕೆಲ ಪ್ರತಿಭಟನೆ ನಡೆಸಿದೆ. ಇದರ ನಡುವೆ ಪ್ರಧಾನಿ ಮೋದಿಗೆ ಪತ್ರ ಬರೆದು ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗೆ ಆಗ್ರಹಿಸಿದ್ದರು.