ಉತ್ತರ ಪ್ರದೇಶದಲ್ಲಿ ಹೆಚ್ಚಾಯ್ತು ತೋಳಗಳ ಕಾಟ, ಈವರೆಗೂ 34 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಉತ್ತರಪ್ರದೇಶದ ಬಹರೈಚ್‌ ಜಿಲ್ಲೆಯಲ್ಲಿ ತೋಳಗಳ ದಾಳಿ ಹೆಚ್ಚಳವಾಗಿದ್ದು, ಇವುಗಳ ನಿಯಂತ್ರಣಕ್ಕೆ ಕಂಡಲ್ಲಿ ಗುಂಡಿಕ್ಕುವುದೇ ಕೊನೆಯ ಉಪಾಯ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ತೀರಾ ಇತ್ತೀಚಿನ ದಾಳಿ ಸೋಮವಾರ ರಾತ್ರಿ ಸಂಭವಿಸಿದ್ದು, ಐದು ವರ್ಷದ ಬಾಲಕಿ ತನ್ನ ಅಜ್ಜಿಯ ಪಕ್ಕದಲ್ಲಿ ತನ್ನ ಮನೆಯಲ್ಲಿ ಮಲಗಿದ್ದಾಗ ತೋಳ ಎಳೆದೊಯ್ದಿದೆ. ಬಾಲಕಿಯ ಮನೆಯವರು ಮತ್ತು ನೆರೆಹೊರೆಯವರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಆಕೆಯ ಪ್ರಾಣ ಉಳಿದಿದೆ.

ಅದೇ ಹೊತ್ತಲ್ಲಿ ದಾಳಿ ಮಾಡಿದ ತೋಳ ತಪ್ಪಿಸಿಕೊಂಡಿದೆ. ಒಟ್ಟಾರೆ ತೋಳದ ನಡೆಸಿದ ದಾಳಿಯಲ್ಲಿ ಈವರೆಗೂ ಒಟ್ಟು 34 ಜನರು ಗಾಯಗೊಂಡಿದ್ದಾರೆ ಎಂದು ಮಹಾಸಿ ಸಿಎಚ್‌ಸಿಯ ಅಧೀಕ್ಷಕ ಡಾ ಆಶಿಶ್ ವರ್ಮಾ ಖಚಿತಪಡಿಸಿದ್ದಾರೆ.

ಎಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು, ಇಬ್ಬರನ್ನು ಬಹರೈಚ್‌ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!