ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರು ಹೇಳಿರುವಂತೆ ನನಗೆ ಯಾವ ಆತಂಕ, ಉದ್ವಿಗ್ನತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಾನು ಎಂದಿಗೂ ಸುಳ್ಳು ಹೇಳಿಲ್ಲ ಮತ್ತು ಯಾವುದೇ ತಪ್ಪು ಮಾಡಿಲ್ಲ, ಆದ್ದರಿಂದ ನನಗೆ ಚಿಂತೆಯಿಲ್ಲ. ವಿರೋಧ ಪಕ್ಷದ ನಾಯಕರು ತಮ್ಮ ವಿರುದ್ಧ ಮಾಡಿರುವ ಸುಳ್ಳು ಆರೋಪಗಳು ನಿಜವಾಗುವುದಿಲ್ಲ ಎಂದು ಚಿಂತಿತರಾಗಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿದ್ದಾರೆ ಅದನ್ನು ನಿಜವೆಂದು ಸಾಬೀತುಪಡಿಸಲು ಸಾಧ್ಯವಾಗದಿರುವ ಬಗ್ಗೆ ಅವರು ಚಿಂತಿತರಾಗಿದ್ದಾರೆ ಎಂದರು.
ಸಿದ್ದರಾಮಯ್ಯ ಟಾರ್ಗೆಟ್ ಆಗಿದ್ದು ಅವರು ಕಾಂಗ್ರೆಸ್ ಸಿ ಎಂ ಅನ್ನುವ ಕಾರಣಕ್ಕೆ ಅಲ್ಲ,, ದಿಲ್ಲಿ ಜುಮ್ಲಾ ವ್ಯಾಪಾರಿಗಳು ಮತ್ತು ಅವರ ರಾಜ್ಯದ ಏಜೆಂಟರುಗಳಿಗೆ ಸೈದ್ಧಾಂತಿಕ ಸವಾಲು ಆಗಿದ್ದಾರೆ,, ಅವರೊಬ್ಬ ಮಾಸ್ ಲೀಡರ್,, ಫ್ಯಾಸಿಸಂನ ದುರಾಡಳಿತಕ್ಕೆ ಸೈಲೆಂಟಾಗಿ ಚಾಲೆಂಜ್ ಆಗಿದ್ದಾರೆ,, ತಮ್ಮ ಮೈಯೆಲ್ಲಾ ಹುಣ್ಣು ಬೆಳೆಸಿಕೊಂಡವರು ಗಂಭೀರ ವಲ್ಲದೆ ಒಂದು ಆಪಾದನೆ ಮಾಡಿಕೊಂಡು ರಾಜಭವನವನ್ನು ದುರುಪಯೋಗ ಮಾಡಿಕೊಂಡು ಕೆಳಗಿಳಿಸುವ ಹುನ್ನಾರ ಅಷ್ಟೇ,, ಜನಸಾಮಾನ್ಯರಿಗೆ ತಿಳಿದುಬಂದಿದೆ,, ಯಾಕೆಂದ್ರೆ ಇವರ ವಿರುದ್ಧ ಕುತಂತ್ರ ಮಾಡುತ್ತಿರುವವರ ಹಿನ್ನೆಲೆ ನೋಡಿದ್ರೆ ಗಬ್ಬು ನಾರತೈತಿ