ಮಲಯಾಳಂ ಚಿತ್ರರಂಗದಲ್ಲಿ ಸದ್ದು ಮಾಡಿದ ಹೇಮಾ ಸಮಿತಿ ವರದಿ: ಇದು ME Too ಭಾಗ 2 ಎಂದ ನಟಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಕುರಿತು ಹೇಮಾ ಸಮಿತಿ ವರದಿ ಸರಕಾರದ ಕೈಸೇರಿದ್ದು, ಇತ್ತ ನಟಿ ಪಾರ್ವತಿ ಮೆನನ್​ ಇದು ಐತಿಹಾಸಿಕ ಕ್ಷಣ ಎಂದು ಹೇಳಿದ್ದಾರೆ.

ಸಿನಿಮಾ ಸೆಟ್​ಗಳಲ್ಲಿ ಅಥವಾ ಸಿನಿಮಾರಂಗದಲ್ಲಿ ತಮ್ಮನ್ನು ದುರುಪಯೋಗ ಮಾಡುವವರ ಹೆಸರನ್ನು ಹೇಳುವ ಮೂಲಕ ನಟಿಯರು ಹೊರಬಂದಿರುವುದರಿಂದ ಮೀಟೂಗಿಂತ ಹೇಮ ಸಮಿತಿಯೇ ಎಷ್ಟೋ ಮೇಲಾಗಿದೆ ಎಂದು ಹೇಳಿದ್ದಾರೆ.

ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ನಟಿಯರು ತಮ್ಮನ್ನು ನೇಮಿಸಿಕೊಳ್ಳುವ ಪುರುಷರಿಂದ ಅವಕಾಶವನ್ನು ಪಡೆದಿದ್ದಕ್ಕಾಗಿ ಕೃತಜ್ಞರಾಗಿರಬೇಕು ಎಂಬ ಕಲ್ಪನೆ ಇತ್ತು. ಭಾರತೀಯ ಚಿತ್ರರಂಗದಲ್ಲಿ ದುರುಪಯೋಗದ ಆರೋಪಗಳು ಹೊಸದೇನಲ್ಲ. ಆದರೆ ಈ ಹಿಂದೆ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ನಟಿಯರಿಗೆ ಯಾರ ಬೆಂಬಲ ಇರುತ್ತಿರಲಿಲ್ಲ. ಮೀಟೂ ಅಲೆ ಆರಂಭವಾದಾಗ ನಟಿಯರು ಇಷ್ಟು ಮುಕ್ತವಾಗಿ ತಾವು ಅನುಭವಿಸಿದ ಕೆಟ್ಟ ಪರಿಸ್ಥಿತಿಯನ್ನು ಹೇಳಿರಲಿಲ್ಲ. ಆದರೆ ಹೇಮ ವರದಿ ಬಳಿಕ ತಮ್ಮ ಸಂಕಷ್ಟದ ವಿಷಯಗಳನ್ನು ಬಹಿರಂಪಡಿಸಿದ್ದಾರೆ. ಆದ್ದರಿಂದ ಇತ್ತೀಚಿನ ಈ ಆರೋಪಗಳನ್ನು ME Too ಭಾಗ 2 ಎಂದು ಹೇಳಿದರು.

ಲೈಂಗಿಕ ದೌರ್ಜನ್ಯಕ್ಕೊಳಗಾದ ನಟಿಯರಿಗೆ ಪಾರ್ವತಿ, ನೀವು ನುರಿತ ಕಲಾವಿದರು. ನಿನಗೆ ಇಷ್ಟು ಕಷ್ಟವಾದರೆ ಬೇರೆ ಕೆಲಸ ಹುಡುಕಿಕೊಳ್ಳಿ ಎಂದು ಯಾರು ಹೇಳಿದರೂ ಕೇಳಬೇಡಿ. ಇದು ನಮ್ಮ ಉದ್ಯಮ ಇದರಿಂದ ನಾವು ನಮ್ಮದೇ ಆದ ಜಾಗವನ್ನು ತೆಗೆದುಕೊಳ್ಳುತ್ತಿದ್ದೇವೆ. ಬೇರೆಯವರ ಜಾಗವನ್ನಲ್ಲ ಎಂಬ ಈ ಸಂದೇಶ ನೀಡಿದರು.

ಇನ್ನು ಮುಂದ ವ್ಯಕ್ತಿಯಿಂದ ವ್ಯಕ್ತಿಗೆ ನೀಡುವ ದೂರಲ್ಲ. ಮಹಿಳೆಯರನ್ನು ವಿಫಲಗೊಳೀಸುವ ವ್ಯವಸ್ಥಿತ ರಚನೆಯ ಬಗ್ಗೆ ನೀಡುವ ದೂರು. ಹೇಮ ವರದಿಯ ನಂತರ ಹಲವು ಪ್ರಮುಖ ನಟರ ವಿರುದ್ಧ ದೂರು ದಾಖಲಾಗಿದೆ ಎಂದರು.

ಹೇಮಾ ಸಮಿತಿಯ ವರದಿಯ ನಂತರ ನಟಿಯರು ತಮಗಾದ ಲೈಂಗಿಕ ದೌರ್ಜನ್ಯದ ವಿರುದ್ಧ ನೀಡಿರುವ ದೂರಿನ ಆಧಾರದ ಮೇಲೆ ಮಲಯಾಳಂನ ಜನಪ್ರಿಯ ನಟರಾದ ಮುಕೇಶ್, ಸಿದ್ದಿಕ್, ಜಯಸೂರ್ಯ, ಸುಧೀಶ್, ಎಡವೇಲ ಬಾಬು ಮತ್ತು ಮಣಿಯನ್ಪಿಳ್ಳ ರಾಜು, ಮಲಯಾಳಂ ನಿರ್ದೇಶಕರಾದ ರಂಜಿತ್ ಮತ್ತು ವಿಕೆ ಪ್ರಕಾಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!