ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್ ಈಗ ಟಿವಿ ಬೇಕೆಂದು ಹೊಸ ಡಿಮ್ಯಾಂಡ್ ಮಾಡಿದ್ದಾನೆ. ಇಷ್ಟು ದಿನ ಟಿವಿ ಸವಾಸವೇ ಬೇಡ ಎಂದು ಕೈ ಮುಗಿಯುತ್ತಿದ್ದ ದರ್ಶನ್ ಗೆ ಈಗ ಟಿವಿ ಬೇಕಂತೆ. ಚಾರ್ಜ್‌ಶೀಟ್ ಸಲ್ಲಿಕೆ ವಿಚಾರದ ಬಗ್ಗೆ ದರ್ಶನ್ ಜೈಲು ಸಿಬ್ಬಂದಿ ಬಳಿ ಪದೇ ಪದೇ ಕೇಳಿದ್ದ. ಈಗ ಮೇಲಾಧಿಕಾರಿಗಳಿಗೆ ಟಿವಿ ಬೇಕೆಂದು ಮನವಿ ಸಲ್ಲಿಸಿದ್ದಾನೆ.
ಹೈ ಸೆಕ್ಯೂರಿಟಿ ಸೆಲ್ ನಲ್ಲಿ ಊಟ ವಿತರಣೆ ವೇಳೆ ಸಿಬ್ಬಂದಿ ಬಳಿ ದರ್ಶನ್ ಟಿವಿ ಬಗ್ಗೆ ಕೇಳಿದ್ದಾನೆ. ಜೈಲು ನಿಯಮದ ಪ್ರಕಾರ ಟಿವಿ ಕೊಡಬಹುದು ಹೀಗಾಗಿ ಟಿವಿ ಬೇಕು ಎಂದು ಮೇಲಾಧಿಕಾರಿಗಳಿಗೆ ದರ್ಶನ್ ಮನವಿ ಮಾಡಿದ್ದಾನೆ.
ಸದ್ಯ ದರ್ಶನ್ ಸೆಲ್ ನಲ್ಲಿ ಟಿವಿ ಇಲ್ಲ, ಈಗ ದರ್ಶನ್ ಸೆಲ್ ಗೆ ಟಿವಿ ಕೊಡುವ ಬಗ್ಗೆ ಅಧಿಕಾರಿಗಳು ಯೋಚಿಸುತ್ತಿದ್ದಾರೆ. ಮೊದಲು ಟಿವಿ ವಿಚಾರ ತೆಗೆಯುತ್ತಿದಂತೆ ಸವಾಸ ಬೇಡ ಎನ್ನೋತ್ತಾ ಕೈ ಮುಗಿದು ಸೈಲೆಂಟ್ ಆಗಿದ್ದ ದರ್ಶನ್ ಈಗ ಟಿವಿ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಇನ್ನು ಶೌಚಾಲಯದ ಸಮಸ್ಯೆಯಾಗುತ್ತಿದೆ ಎಂದು ಸರ್ಜಿಕಲ್ ಚಯರ್ ಗೆ ಬೇಡಿಕೆ ಇಡಲಾಗಿತ್ತು. ಈ ಬೇಡಿಕೆಯನ್ನು ಒಪ್ಪಿದ ಜೈಲಾಧಿಕಾರಿಗಳು ದರ್ಶನ್ ಗೆ ಅದನ್ನು ಒದಗಿಸಿದ್ದಾರೆ. ಈಗ ಟಿವಿಗೆ ಬೇಡಿಕೆ ಇಟ್ಟಿರುವುದನ್ನು ನೆರವೇರಿಸುತ್ತಾರಾ? ಇಲ್ಲವೂ ಕಾದು ನೊಡಬೇಕಿದೆ.