SHOCKING | ಒಂಬತ್ತು ದಿನದ ಮಗುವಿಗೆ ವಿಷ ಹಾಕಿ ಕೊಂದ ಪೋಷಕರು ಅರೆಸ್ಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಮ್ಮ 9 ದಿನದ ಹಸುಗೂಸಿಗೆ ವಿಷ ಹಾಕಿ ಹತ್ಯೆ ಮಾಡಿ, ಶವವನ್ನು ಹೂತು ಹಾಕಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೆಣ್ಣು ಶಿಶು ಹತ್ಯೆ ಪ್ರಕರಣದಲ್ಲಿ ತಮಿಳುನಾಡಿನ ವೆಲ್ಲೂರು ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಮೊದಲನೆಯದ್ದು ಹೆಣ್ಣುಮಗುವಿತ್ತು, ಈಗ ಎರಡನೆಯದೂ ಹೆಣ್ಣಾಗಿದೆ ಅದು ತಮಗೆ ಬೇಡ ಎಂದು ಹೇಳಿ ಶಿಶುವಿಗೆ ವಿಷ ಉಣಿಸಿ ಹೆತ್ತವರೇ ಕೊಲೆ ಮಾಡಿದ್ದರು.

ಈಗಾಗಲೇ ಎರಡು ವರ್ಷದ ಮಗಳನ್ನು ಹೊಂದಿರುವ ಸಿ ಜೀವಾ ಮತ್ತು ಜೆ ಡಯಾನಾ ದಂಪತಿಗೆ ಆಗಸ್ಟ್​ 27ರಂದು ಎರಡನೇ ಹೆಣ್ಣುಮಗು ಹುಟ್ಟಿತ್ತು. ಡಯಾನಾ ಹೆರಿಗೆಯ ಸಮಯದಲ್ಲಿ ತೊಂದರೆಯಾದ ಕಾರಣ ವೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಡಿಸ್ಚಾರ್ಜ್ ಆಗಿದ್ದು ಮನೆಗೆ ಮರಳಿದ ನಂತರ, ದಂಪತಿ ತಮ್ಮ ನವಜಾತ ಶಿಶುವಿಗೆ ವಿಷಪೂರಿತ ಹಾಲನ್ನು ಕುಡಿಸಿದ್ದಾರೆ. ಮಗು ಸಾವನ್ನಪ್ಪಿದಾಗ, ಯಾವುದೇ ಸಂಬಂಧಿಕರಿಗೆ ತಿಳಿಸದೆ ಆಕೆಯ ಶವವನ್ನು ತಮ್ಮ ಹಿತ್ತಲಿನಲ್ಲಿಯೇ ಹೂತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!