ದಿಗಂತ ವರದಿ ತುಮಕೂರು:
ತಿಪಟೂರು: ರಸ್ತೆಯ ಮೂಲಕ ಶಾಲೆಗೆ ತೆರಳಲು ಬರುತ್ತಿದ್ದ ವಿದ್ಯಾರ್ಥಿನಿ ಹಾಗೂ ತಾಯಿ ಮೇಲೆ ಗಾರ್ಮೆಂಟ್ಸ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗೊಂಡಿದ್ದಾರೆ.
ತಿಪಟೂರು ತಾಲ್ಲೂಕಿನ ಹುಚ್ಚನಹಟ್ಟಿ ರಾಮಶೆಟ್ಟಿಹಟ್ಟಿ ಬಳಿಯ ರಾಷ್ಠಿಯ ಹೆದ್ದಾರಿಯ ಬೈಪಾಸ್ ಬಳಿ ನಡೆದಿದೆ.
ರಾಮಶೆಟ್ಟಿಹಳ್ಳಿ ಗ್ರಾಮದ ಕಮಲಮ್ಮ (45) ಹಳೇಪಾಳ್ಯ ಶಾಲೆಯಲ್ಲಿ 8 ನೆ ತರಗತಿ ವ್ಯಾಸಂಗ ಮಾಡುತ್ತಿರುವ ವೀಣಾ (13) ಮೃತ ವ್ಯಕ್ತಿಗಳು.
ಗಾಯಗೊಂಡವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಾಲು ಮಾಡಲಾಗಿದೆ. ಪ್ರತಿ ನಿತ್ಯ ಈ ಬಾರಿ ಅಪಘಾತಗಳು ನೆಡೆಯುತ್ತಿದ್ದನ್ನು ಖಂಡಿಸಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೃತ ದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಪ್ರತಿಭಟನೆಗೆ ನಿರತರಾಗಿದ್ದಾರೆ.
ಈ ಪ್ರಕರಣವು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್ ಪಿ, ತಾಲ್ಲೂಕು ದಂಡಾಧಿಕಾರಿ ಭೇಟಿ ನೀಡಿದ್ದಾರೆ.