ಮೇಷ
ನೀವು ಯೋಚಿಸಿದ ಕಾರ್ಯ ಇಂದು ಸಫಲವಾಗದು. ಅಸಹನೆ ಹೆಚ್ಚಳ. ಕೌಟುಂಬಿಕ ವಿಷಯ ಅಸಮಾಧಾನ ಹೆಚ್ಚಿಸುವುದು. ವೈಮನಸ್ಸು ಸಂಭವ.
ವೃಷಭ
ಆಹಾರದ ವಿಚಾರದಲ್ಲಿ ಎಚ್ಚರ ವಹಿಸಿ. ಅಜೀರ್ಣದಂಥ ಸಮಸ್ಯೆ ಉಂಟಾದೀತು. ಮನೆಯಲ್ಲಿ ವಾಗ್ವಾದ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ.
ಮಿಥುನ
ಕಳೆಗುಂದಿದ ದಿನ. ಉತ್ಸಾಹಹೀನತೆ. ಹತಾಶೆ, ಕೋಪ ಆವರಿಸಬಹುದು. ಯಾರ ಜತೆಗೂ ವಾಗ್ವಾದಕ್ಕೆ ಇಳಿಯದಿರಿ. ಆರ್ಥಿಕ ವ್ಯಯ.
ಕಟಕ
ನಿಮಗೆ ಪೂರಕವಾದ ಬೆಳವಣಿಗೆ. ಕೌಟುಂಬಿಕ ಪರಿಸರ ತಿಳಿಯಾಗಿ ಮನಸಿಗೆ ನೆಮ್ಮದಿ. ವೃತ್ತಿಯಲ್ಲಿ ಉಂಟಾದ ಹಿನ್ನಡೆ ನಿವಾರಣೆ, ಉನ್ನತಿಯ ಹಾದಿ.
ಸಿಂಹ
ಇಂದು ಮಾಡಬೇಕಿರುವ ಕೆಲಸದಲ್ಲಿ ಸವಾಲು ಹೆಚ್ಚು. ಇತರರಿಂದ ಟೀಕೆ ಕೇಳಿಬಂದೀತು. ಇದು ನಿಮ್ಮ ನಿರ್ವಹಣೆ ಮೇಲೆ ಪರಿಣಾಮ ಬೀರದಿರಲಿ. ಖರ್ಚು ಅಧಿಕ.
ಕನ್ಯಾ
ನಿಮ್ಮ ಕಾರ್ಯದಲ್ಲಿ ಪ್ರತಿಕೂಲ ಸನ್ನಿವೇಶ ಎದುರಾದೀತು. ಅದನ್ನು ನಿಭಾಯಿಸುವಲ್ಲಿ ಕಠಿಣ ನಿಲುವು ತಳೆಯಲು ಸಿದ್ಧರಾಗಿರಿ. ಹಿಂಜರಿಕೆ ತೋರಬೇಕಾಗಿಲ್ಲ.
ತುಲಾ
ಪ್ರತಿಕೂಲ ಪರಿಸ್ಥಿತಿ ಉಂಟಾದೀತು. ಎದುರಿಸಿ ಕಷ್ಟಕ್ಕೆ ಸಿಲುಕದಿರಿ. ಹೊಂದಿಕೊಂಡು ಹೋಗುವುದು ಮುಖ್ಯ. ತಾಳ್ಮೆಯಿರಲಿ.
ವೃಶ್ಚಿಕ
ಇಂದು ಭಾವನಾತ್ಮಕ ದೃಢತೆ ಪ್ರದರ್ಶಿಸಿ. ಸಣ್ಣ ಹಿನ್ನಡೆಗೆ ಅಂಜಿ ಕೂರದಿರಿ. ಕೆಲವರು ನಿಮ್ಮನ್ನು ದೂರ ಮಾಡಿದರೂ ಅವರಿಲ್ಲದೆ ಬದುಕಲು ಕಲಿಯಿರಿ.
ಧನು
ಕೆಲದಿನಗಳ ಒತ್ತಡ, ಉದ್ವಿಗ್ನತೆ ಇಂದು ನಿವಾರಣೆ. ಇದರಿಂದ ಸಂತೋಷದ ಮನಸ್ಥಿತಿ. ಬಂಧುಗಳ ಕಿರಿಕಿರಿ ತಪ್ಪುವುದು. ಆರ್ಥಿಕ ಉನ್ನತಿ.
ಮಕರ
ಚಿಂತೆಗೆ ಕಾರಣವಾಗಿದ್ದ ಕೌಟುಂಬಿಕ ವಿಷಯವೊಂದು ಪರಿಹಾರ ಕಾಣುವುದು. ಮಾನಸಿಕ ನಿರಾಳತೆ. ವೃತ್ತಿಯಲ್ಲಿ ಪ್ರತಿಸ್ಪರ್ಧೆ ಹೆಚ್ಚುವುದು.
ಕುಂಭ
ಹೆಚ್ಚು ಕ್ರಿಯಾಶೀಲ ದಿನ. ಜಡತ್ವ ಬಿಟ್ಟು ಚುರುಕಾಗಿರಿ. ನಿಮ್ಮ ಕ್ಷೇತ್ರದಲ್ಲಿ ಪ್ರತಿಸ್ಪರ್ಧೆ ಹೆಚ್ಚು. ಸ್ಪರ್ಧೆಯಲ್ಲಿ ಹಿಂದೆ ಬೀಳದಿರಿ. ಕೌಟುಂಬಿಕ ಸಮ್ಮಿಲನ.
ಮೀನ
ವಿರಾಮ ಪಡೆಯುವ ಮನಸ್ಸಿದ್ದರೂ ಅದು ಸಾಧ್ಯವಾಗದು. ಹೆಚ್ಚುವರಿ ಕೆಲಸದ ಹೊಣೆಗಾರಿಕೆ. ಸುಲಭವಾಗಿ ಕಂಡ ಕಾರ್ಯವೊಂದು ಕಠಿಣವಾಗಲಿದೆ.