ಸ್ವಯಂಘೋಷಿತ `ದೇವರ ಮಗ’ ಖ್ಯಾತಿಯ ಅಪೊಲೋ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನನ್ನು ತಾನು ‘ದೇವರಿಂದ ನೇಮಕಗೊಂಡ ಮಗ’ ಎಂದು ಕರೆದುಕೊಳ್ಳುತ್ತಿದ್ದ ಪ್ರಭಾವಿ ಪಾಸ್ಟರ್ ಅಪೊಲೊ ಕ್ವಿಬೊಲೊಯ್ ನನ್ನು ಮಕ್ಕಳನ್ನು ಲೈಂಗಿಕ ಬಳಕೆಗೆ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಫಿಲಿಪೈನ್ಸ್‌ನಲ್ಲಿ ಭಾನುವಾರ ಬಂಧಿಸಲಾಗಿದೆ.
ದೇವರ ಮಗನೆಂದು ಜನರನ್ನು ನಂಬಿಸಿದ್ದ ಅಪೊಲೊ ಕ್ವಿಬೊಲೊಯ್ ಹಲವು ಅಕ್ರಮ ಎಸಗಿದ್ದ ಎನ್ನಲಾಗಿದೆ.

ಬಿಗಿ ಭದ್ರತೆ ನಡುವೆ ಸೀಕ್ರೇಟ್​ ಜಾಗ(ನೆಲಮಾಳಿಗೆ)ದಲ್ಲಿ ಕುಳಿತಿದ್ದ ಪಾಸ್ಟರ್​ನನ್ನು ಹಾಲಿವುಡ್​ ಸಿನಿಮಾ ಮಾದರಿಯಲ್ಲಿ ಏಕಕಾಲಕ್ಕೆ 2 ಸಾವಿರ ಪೊಲೀಸರು, ಹೆಲಿಕಾಪ್ಟರ್​, ರಾಡಾರ್​ ವ್ಯವಸ್ಥೆ ಬಳಸಿ ಸೆರೆಹಿಡಿಯಲಾಗಿದೆ.

ಅಕ್ರಮಹಣ, ಡ್ರಗ್ಸ್, ಹುಡುಗಿಯರ ಕಳ್ಳಸಾಗಾಣೆ, ಅಕ್ರಮ ಶಸ್ತ್ರಾಸ್ತ್ರಗಳು, ಭಯೋತ್ಪಾದಕರು..ಹೀಗೆ ಹಲವು ಅಕ್ರಮಗಳಲ್ಲಿ ತೊಡಗಿಸಿಕೊಂಡು ಫಿಲಿಪ್ಪೀನ್ಸ್‌ನ ದಾವೋ ನಗರದಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ಹಲವು ಅರಾಜಕತೆ ನಡೆಸುತ್ತಿದ್ದ ಪಾಸ್ಟರ್ ಅಪೊಲೊ ಕ್ವಿಬೊಲೊಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ತಾನು ಇಡೀ ಬ್ರಹ್ಮಾಂಡದ ಯಜಮಾನ ಮತ್ತು ದೇವರ ಆಯ್ಕೆಮಾಡಿದ ಮಗು ಎಂದು ಘೋಷಿಸಿಕೊಂಡಿದ್ದ ಅಪೊಲೊ, 75 ಎಕರೆ ಪ್ರದೇಶದಲ್ಲಿ ಯೇಸುಕ್ರಿಸ್ತನ ಸಾಮ್ರಾಜ್ಯ ಎಂಬ ದೊಡ್ಡ ಮಾಯಾನಗರಿ ಸ್ಥಾಪಿಸಿದ್ದ. ಇದು 75 ಸಾವಿರ ಆಸನಗಳ ಸಾಮರ್ಥ್ಯದ ಬೃಹತ್ ಕ್ರೀಡಾಂಗಣ, ಪ್ರಾರ್ಥನಾ ಮಂದಿರ ಮತ್ತು 40 ಇತರ ಕಟ್ಟಡಗಳನ್ನು ಹೊಂದಿತ್ತು. ಅಂದಾಜು 70 ಲಕ್ಷ ಭಕ್ತರನ್ನು ಈ ಪಾಸ್ಟರ್​ ಹೊಂದಿದ್ದ ಎನ್ನಲಾಗಿದೆ.

ಅಪೊಲೊ ಕ್ವಿಬೊಲೊಯ್ ಅವರು ಮಾಜಿ ಫಿಲಿಪೈನ್ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟೊ ಅವರ ನಿಕಟ ಸಹವರ್ತಿಯಾಗಿದ್ದಾರೆ. ಅಧ್ಯಕ್ಷ ಸ್ಥಾನದಿಂದ ಅವರು ಕೆಳಗಿಳಿದ ನಂತರ, ಅಪೊಲೊಗೆ ತೊಂದರೆ ಪ್ರಾರಂಭವಾಯಿತು.

2021 ರಲ್ಲಿ, ಅಮೆರಿಕದ ನ್ಯಾಯಾಂಗ ಇಲಾಖೆಯು ಅಪೊಲೊ ಕ್ವಿಬೋಲಾಯ್ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿತು. ಅಪೊಲೊ ಸಣ್ಣ ಮಕ್ಕಳನ್ನು ಸೆಕ್ಸ್ ದಂಧೆಗೆ ಸರಬರಾಜು ಮಾಡುವುದು, ಜನರನ್ನು ವಂಚಿಸುವುದು, ಅಪಾರ ಪ್ರಮಾಣದ ಹಣವನ್ನು ಕಳ್ಳಸಾಗಣೆ ಮಾಡುವುದು ಮುಂತಾದ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಕ್ವಿಬೋಲಾಯ್ ನನ್ನು ಬಂಧಿಸಲಾಗಿದೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!