ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕುಟ್ಟನಾಡು ಬಾತುಕೋಳಿ ಕೊರಳಿಗೆ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ!
ರಾಜ್ಯದ ಈ ವಿಶಿಷ್ಟ ಬಾತುಕೋಳಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಗುರುತಿಸಲ್ಪಟ್ಟ ಪ್ರಾಣಿ ತಳಿಗಳಿಯ ನೋಂದಣಿ ಪ್ರಮಾಣಪತ್ರ ಲಭಿಸಿದ್ದು, ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯವು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಇದನ್ನು ನೀಡಲಾಗಿದೆ.
ದಿಲ್ಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಸಂಕೀರ್ಣದಲ್ಲಿ ನಡೆದ ವಿವಿಧ ತಳಿಗಳ ಸಂರಕ್ಷಣೆಗಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಕೇರಳದ ವಿಶಿಷ್ಟ ತಳಿಗಳಾದ ವೆಚ್ಚೂರ್ ಹಸು, ಮಲಬಾರ್ ಮೇಕೆ, ಅಟ್ಟಪ್ಪಾಡಿ ಕಪ್ಪು ಮೇಕೆ ಮತ್ತು ತಲಶ್ಶೇರಿ ಕೋಳಿಗಳು ಈ ಮೊದಲೇ ರಾಷ್ಟ್ರೀಯ ಮನ್ನಣೆಯನ್ನು ಪಡೆದಿವೆ.


