ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈಕೋರ್ಟ್ ತೀರ್ಪಿನ ಬಳಿಕ ಸಿದ್ದರಾಮಯ್ಯ ವೀಕ್ ಆಗಿಲ್ಲ, ಗುಂಡುಕಲ್ಲು ಇದ್ದ ಹಾಗೆ ಇದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಸಿಎಂ ರಾಜೀನಾಮೆ ಕೊಡಬೇಕು ಎಂಬ ಮಾತು ಕೇಳಿ ಬರ್ತಿದೆ. ನಾವು ನ್ಯಾಯಕ್ಕಾಗಿ ಹೈಕೋರ್ಟ್‌ಗೆ ಹೋಗಿದ್ದೆವು. ಸಿಎಂ ಪಾತ್ರ ಮುಡಾ ಪ್ರಕರಣದಲ್ಲಿ ಏನೂ ಇಲ್ಲ. ಸಿಎಂ ಹೆಸರು ಹೇಳದಿದ್ರೆ ಕೆಲವರಿಗೆ ಸಮಾಧಾನ ಆಗೋದಿಲ್ಲ. ನೋಡ್ತಾ ಇರಿ ಎಲ್ಲ ಆರೋಪಗಳನ್ನು ಸಿಎಂ ಮೀರಿ ಬರ್ತಾರೆ ಎಂದಿದ್ದಾರೆ.
ಅವರಿಂದ ಯಾವುದೇ ಅಧಿಕಾರ ದುರುಪಯೋಗ ಆಗಿಲ್ಲ. ಆದರೆ ಕೋರ್ಟಿನಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲ. ಮುಂದೆ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಿದೆ. ಡಬಲ್ ಬೆಂಚ್‌ನಲ್ಲಿ ಇದರ ಬಗ್ಗೆ ಪ್ರಶ್ನೆ ಮಾಡುತ್ತೇವೆ. ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು.