ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರ ಹೊರವಲಯದ ಟಮಕ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪತ್ತೆಯಾಗಿದ್ದ ಸೂಟ್‌ಕೇಸ್ ಕೆಲ ಹೊತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ಸೂಟ್ಕೇಸ್ನಿಂದ ಅಲಾರಾಂ ರೀತಿಯ ಶಬ್ದ ಬರುತ್ತಿದ್ದ ಹಿನ್ನೆಲೆಯಲ್ಲಿ ಬಾಂಬ್ ಇರಬಹುದು ಎಂದು ಹೆದರಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ವಿಚಾರ ತಿಳಿಯುತ್ತಿದ್ದಂತೆ ಗಲ್ಪೇಟೆ ಠಾಣೆ ಪೊಲೀಸರು, ಎಸ್ಪಿ ನಿಖಿಲ್, ಹೆಚ್ಚುವರಿ ಎಸ್ಪಿ ರವಿಶಂಕರ್ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದರು.
ಬಳಿಕ, ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದಾಗ, ಅದು ಕ್ರೌನ್ ಕಂಪನಿಯ ಸೂಟ್‌ಕೇಸ್ ಎಂದು ತಿಳಿಯಿತು. ಸೆನ್ಸಾರ್ ಸೂಟ್‌ಕೇಸ್ ಆಗಿದ್ದು, ಯಾರೋ ಲಾಕರ್ ಪಾಸ್ವರ್ಡ್ ಅನ್ನು ತಪ್ಪಾಗಿ ಹಾಕಿದ್ದರಿಂದ ಶಬ್ದ ಬಂದಿದೆ ಎಂದು ಮಾಹಿತಿ ನೀಡಿದರು.