ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ.24.10ರಷ್ಟು ಮತದಾನವಾಗಿದೆ.
ಭಾರತದ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ರಿಯಾಸಿಯಲ್ಲಿ 33.39 ಪ್ರತಿಶತದಷ್ಟು ಮತದಾನವಾಗಿದೆ ಮತ್ತು ಶ್ರೀನಗರದಲ್ಲಿ 11.67 ಪ್ರತಿಶತದಷ್ಟು ಕಡಿಮೆ ಮತದಾನವಾಗಿದೆ.
ಇಸಿಐ ಪ್ರಕಾರ, ಪೂಂಚ್ ಶೇಕಡಾ 33.06, ರಜೌರಿ ಶೇಕಡಾ 30.04, ಗಂದರ್ಬಾಲ್ ಶೇಕಡಾ 27.20, ಬುಡ್ಗಾಮ್ ಶೇಕಡಾ 25.53. ಮತದಾನವಾಗಿದೆ.
ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಕೇಂದ್ರಾಡಳಿತ ಪ್ರದೇಶದಾದ್ಯಂತ ನಡೆಯುತ್ತಿದೆ. ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.