8 ವರ್ಷ ಸೇವೆ ಪೂರೈಸಿ ನಿವೃತ್ತಿ ಜೀವನಕ್ಕೆ ಜ್ಯೂಲಿ: ಕೇಕ್ ತಿನ್ನಿಸಿ ಅಕ್ಕರೆ ತೋರಿದ ಸಿಬ್ಬಂದಿ!

ಹೊಸದಿಗಂತ ವರದಿ,ಮಂಗಳೂರು:

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ವಿಭಾಗದಲ್ಲಿನ ಸಿಬ್ಬಂದಿಯಾಗಿ ಕಳೆದ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಕೈಗಾರಿಕಾ ಭದ್ರತಾ ದಳದ ಶ್ವಾನ ಜ್ಯೂಲಿ ನಿವೃತ್ತಿ ಜೀವನಕ್ಕೆ ಕಾಲಿಟ್ಟಿದ್ದಾಳೆ.

ಪುಟ್ಟ ಟ್ರಾಲಿಯಲ್ಲಿ ಮೆರವಣಿಗೆ
ಲ್ಯಾಬ್ರಡಾರ್ ತಳಿಯ ಜ್ಯೂಲಿ, 2013, ಮಾ.26ರಂದು ಕರ್ತವ್ಯಕ್ಕೆ ಸೇರಿದ್ದಳು. ಈಕೆಯ ಸ್ಥಾನವನ್ನು ರಿಯೋ ತುಂಬಲಿದೆ. ಜ್ಯೂಲಿಗೆ ಹೂಮಾಲೆ ಹಾಕಿ ಕೇಕ್ ಕತ್ತರಿಸಿ ಪ್ರೀತಿ ತೋರಿದ ಸಿಏಎಸ್‌ಎಫ್ ಸಿಬ್ಬಂದಿ, ಹೂಗಳಿಂದ ಅಲಂಕರಿಸಲಾದ ಪುಟ್ಟ ಟ್ರಾಲಿಯಲ್ಲಿ ಕೂರಿಸಿ, ಅದನ್ನು ಎಲ್ಲರೂ ಸೇರಿ ಎಳೆಯುವ ಮೂಲಕ ಗೌರವಿಸಿದರು.

ದೀರ್ಘ ಸೇವೆ, ಬಳಿಕ ಶ್ವಾನದಳ ಕೆಲಸದ ಒತ್ತಡದಿಂದ ತಮ್ಮ ಸೂಕ್ಷ್ಮತೆಯನ್ನು ನಿಧಾನವಾಗಿ ಕಳೆದುಕೊಳ್ಳುವುದರಿಂದ ಹಾಗೂ ಅವುಗಳ ಮೇಲೆ ಅಧಿಕ ಒತ್ತಡ ಹೇರದಿರುವ ಉದ್ದೇಶದಿಂದ ಅವುಗಳನ್ನು ನಿವೃತ್ತಿಗೊಳಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!