ನವರಾತ್ರಿ ಸಂಭ್ರಮ: ಅಯೋಧ್ಯೆ ರಾಮಲಲಾ ದರುಶನಕ್ಕೆ ಹೊಸ ವೇಳಾಪಟ್ಟಿ ಬಿಡುಗಡೆ

ಹೊಸದಿಗಂತ ವರದಿ, ಅಯೋಧ್ಯೆ:

ನವರಾತ್ರಿ ಸಂದರ್ಭದಲ್ಲಿ ಜನ್ಮಭೂಮಿ ರಾಮಮಂದಿರದಲ್ಲಿ ರಾಮಲಲಾ ದರುಶನದ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೊಸ ವೇಳಾಪಟ್ಟಿ ಹಂಚಿಕೊಂಡಿದೆ.

ಅ.3ರಿಂದ ಬೆಳಗ್ಗೆ 4.30ರಿಂದ 4.40ರವರೆಗೆ ಮಂಗಲ ಆರತಿ ನಡೆಯಲಿದೆ. 4.40ರಿಂದ 6.30ರವರೆಗೆ ಅಭಿಷೇಕ, ಶೃಂಗಾರ ಇತ್ಯಾದಿಗಾಗಿ ಪರದೆ ಎಳೆಯಲಾಗುತ್ತದೆ. 6.30ರಿಂದ ಶೃಂಗಾರ ಆರತಿ ಜರುಗಲಿದೆ. ನಂತರ 7-9 ಗಂಟೆಯವರಗೆ ದರುಶನ, 9ರಿಂದ 9.05ರ ತನಕ ಪರದೆ ಎಳೆಯಲಿದ್ದು, ಬಾಲಭೋಗ್ ಅರ್ಪಿಸಲಾಗುತ್ತದೆ. 9.05ರಿಂದ 11.45 ರವರೆಗೆ ದರುಶನ, 11.45ರಿಂದ 12 ಗಂಟೆ ತನಕ ಪರದೆ ಎಳೆದು ರಾಜಭೋಗ್ ಅರ್ಪಿಸಲಾಗುತ್ತದೆ.

ಮಧ್ಯಾಹ್ನ 12 ಗಂಟೆಗೆ ಭೋಗ್ ಆರತಿ ಜರುಗಲಿದೆ. 12.30ರವರೆಗೆ ದರುಶನ ಇರಲಿದ್ದು, 12.30ರಿಂದ 1.30ರವರೆಗೆ ಪರದೆ ಎಳೆಯಲಿದ್ದು, ರಾಮಲಲಾಗೆ ಶಯನ. 1.30ಕ್ಕೆ ದೇವರ ಉತ್ಥಾನ, ಭೋಗ್, ಆರತಿಯ ಬಳಿಕ 1.35ರಿಂದ 4 ಗಂಟೆಯವರೆಗೆ ದರುಶನ ನಡೆಯಲಿದೆ. ಸಂಜೆ 4ರಿಂದ 4.05ರವರೆಗೆ ಪರದೆ ಹಾಕಲಾಗುತ್ತದೆ, ನೈವೇದ್ಯ ಸಮರ್ಪಿಸಲಾಗುತ್ತದೆ. 4.05-6.45 ರವರೆಗೆ ದರುಶನ, 6.45-7 ಗಂಟೆಯವರೆಗೆ ಪರದೆ ಎಳೆಯಲಿದ್ದು, ಭೋಗ್ ಅರ್ಪಿಸಲಾಗುತ್ತದೆ. ರಾತ್ರಿ 7 ಗಂಟೆ ಸಂಧ್ಯಾ ಆರತಿ, 7-8.30ರವರೆಗೆ ದರುಶನ, 9 ಗಂಟೆಗೆ ಪ್ರವೇಶ ದ್ವಾರ ಮುಚ್ಚಲಾಗುತ್ತದೆ. 9.15-9.30ರವರೆಗೆ ಪರದೆ ಎಳೆದು ಭೋಗ್ ಅರ್ಪಿಸಲಾಗುತ್ತದೆ. 9.30-9.45ರವರೆಗೆ ಶಯನ ಆರತಿ ನಡೆಯಲಿದ್ದು, 9.45ರಿಂದ 4.30ರವರೆಗೆ ಶಯನ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!