ಹೊಸದಿಗಂತ ವರದಿ, ಹುಬ್ಬಳ್ಳಿ:
ಆಕ್ಷನ್ ಪ್ರೀನ್ಸ್ ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯನಟನೆಯ ಮಾರ್ಟಿನ್ ಸಿನಿಮಾ ಫ್ರೀ ರಿಲೀಸ್ ಸಮಾರಂಭ ದಾವಣಗೆರೆಯಲ್ಲಿ ಅ. ೬ ರಂದು ನಡೆಯಲಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಹಂಚಿಕೊಂಡ ಸಿನಿಮಾದ ನಟ ಧ್ರುವ ಸರ್ಜಾ , ಅ. ೧೧ ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ. ನಾನು ಹಿಂದೆ ನಟಿಸಿರುವ ಅದ್ದೂರಿ, ಬಹದ್ದೂರ, ಭರ್ಜರಿ ಸಿನಿಮಾಗಿಂತ ವಿಭಿನ್ನವಾಗಿದೆ. ಇದು ಆಕ್ಷನ್ ಸಿನಿಮಾ ಆಗಿದ್ದು, ಕುಟುಂಬ ಸಮೇತ ಎಲ್ಲರೂ ನೋಡುವ ಸಿನಿಮಾ ಆಗಿದೆ ಎಂದು ತಿಳಿಸಿದರು.
ಈಗಾಗಲೇ ಸಿನಿಮಾ ಜೀವ ನೀನೆ ಹಾಗೂ ಆಥೆಮ್ ಆಫ್ ಮಾರ್ಟಿನ್ ಸಾಂಗ್ ಬಿಡುಗಡೆಯಾಗಿದ್ದು, ಸಿನಿಮಾ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಉತ್ತರ ಕರ್ನಾಟಕದ ಜನರು ಬಹಳ ಪ್ರಿತಿಯಿಂದ ನಮ್ಮನ್ನು ಕಾಣುತ್ತಾರೆ. ಆದ್ದರಿಂದ ನನ್ನ ಪ್ರತಿ ಸಿನಿಮಾದಲ್ಲಿ ಉತ್ತರ ಕರ್ನಾಟಕ ಹಾಗೂ ಮೈಸೂರು ಭಾಗದಲ್ಲಿ ಚಿತ್ರೀಕರಣ ಮಾಡಿರುತ್ತೇವೆ. ಈ ಸಿನಿಮಾದಲ್ಲಿ ಬಾದಾಮಿಯಲ್ಲಿ ಚಿತ್ರೀಕರಣ ಆಗಿದೆ ಎಂದು ಹೇಳಿದರು.
ಸಿನಿಮಾದ ನಟಿ ವೈಭವಿ ಶಾಂಡಿಲ್ಯ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಗೆ ಬಂದಿದ್ದು, ಸಂತಸ ತಂದಿದೆ. ಮಾರ್ಟಿನ್ ಸಿನಿಮಾದ ಜೀವ ನೀನು ಎಂಬ ಮೊದಲ ಸಾಂಗ್ ಬಹಳ ಜನ ಇಷ್ಟ ಪಟ್ಟಿದ್ದಾರೆ. ಅದರಂತೆ ಸಿನಿಮಾವನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಹಾರೈಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸ್ವರ್ಣಾ ಗ್ರೂಪ್ ಕಂಪನಿಯ ಚೇರಮನ್ ವಿ.ಎಸ್.ವಿ. ಪ್ರಸಾದ ಇದ್ದರು.
ನಟ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಉದಯ್ ಕೆ. ಮೆಹ್ತಾ ಈ ಚಿತ್ರ ನಿರ್ಮಿಸಿದ್ದಾರೆ. ಮಣಿ ಶರ್ಮ ಅವರ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೂಡಿಬಂದಿದ್ದು, ರವಿ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸತ್ಯ ಹೆಗಡೆ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ತಾರಾಬಳಗದಲ್ಲಿ ಅನ್ವೇಶಿ ಜೈನ್, ಜಾರ್ಜಿಯ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕ ಅವಿನಾಶ್, ನಿಕ್ತಿನ್ ರ್, ನವಾಬ್ ಶಾ, ರೋಹಿತ್ ಪಾಠಕ್ ಮುಂತಾದವರಿದ್ದಾರೆ.