ಸಾಮಾಗ್ರಿಗಳು
ಬೀನ್ಸ್
ಆಲೂಗಡ್ಡೆ
ಕ್ಯಾರೆಟ್
ಕ್ಯಾಪ್ಸಿಕಂ
ಕಾಳುಗಳು
ನಿಮ್ಮಿಷ್ಟದ ಇತರೆ ತರಕಾರಿಗಳು
ಬೆಣ್ಣೆ
ಉಪ್ಪು
ಖಾರದಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಅವಲಕ್ಕಿ
ಮಾಡುವ ವಿಧಾನ
ಮೊದಲು ತರಕಾರಿಗಳನ್ನು ಸ್ಟೀಮ್ ಮಾಡಿಕೊಳ್ಳಿ, ಆಲೂಗಡ್ಡೆ ಬಿಟ್ಟು
ನಂತರ ಪುಟಾಣಿ ಮಿಕ್ಸಿಗೆ ಹಾಕಿ ಒಂದು ರೌಂಡ್ ತರಿತರಿಯಾಗುವಂತೆ ತಿರುಗಿಸಿಕೊಳ್ಳಿ
ನಂತರ ಅದಕ್ಕೆ ಆಲೂಗಡ್ಡೆ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಖಾರದಪುಡಿ ಹಾಕಿ ಕೈಯಲ್ಲಿ ಮಿಕ್ಸ್ ಮಾಡಿ, ಅವಲಕ್ಕಿ ಪುಡಿ ಹಾಕಿ ಪುಟಾಣಿ ಟಿಕ್ಕಿ ಮಾಡಿಕೊಳ್ಳಿ
ನಂತರ ಪ್ಯಾನ್‌ಗೆ ಬೆಣ್ಣೆ ಹಾಕಿ, ಪುಟಾಣಿ ಕಟ್ಲೆಟ್ ಹಾಕಿ ಎರಡೂ ಕಡೆ ಫ್ರೈ ಮಾಡಿ ಮಕ್ಕಳಿಗೆ ಕೊಡಿ