ಬೆಳಗ್ಗೆ ಬಿಸಿ ನೀರಿಗೆ ಬಿಸಿ ಮಾಡಿ ಪುಡಿ ಮಾಡಿದ ಜೀರಿಗೆ ಪುಡಿ ಹಾಕಿ ಕುಡಿಯಿರಿ, ಅಥವಾ ನೀರಿಗೆ ಜೀರಿಗೆ ಹಾಕಿ ಕುದಿಸಿ ಕುಡಿಯಿರಿ, ಇದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?
ಒಂದು ಲೋಟ ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರಿಂದ ಜೀರ್ಣಕ್ರಿಯೆಯು ವೃದ್ಧಿಸುವುದು ಮತ್ತು ಹೊಟ್ಟೆಯ ಸಮಸ್ಯೆಯನ್ನು ಪರಿಣಾಮಕಾರಿ ಆಗಿ ನಿವಾರಣೆ ಮಾಡಬಹುದು. ಜೀರಿಗೆಯು ದೇಹದಲ್ಲಿರುವ ವಿಷವನ್ನು ಹೊರಗೆ ಹಾಕುವುದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಾಗಿರುವಂತಹ ಅಸಿಡಿಟಿ, ಹೊಟ್ಟೆಯ ಗ್ಯಾಸ್ ಮತ್ತು ವಾಕರಿಕೆ ನಿವಾರಣೆ ಮಾಡುವುದು.
ಕಬ್ಬಿನಾಂಶ ಮತ್ತು ಆಹಾರದ ನಾರಿನಾಂಶವನ್ನು ಹೊಂದಿರುವಂತಹ ಜೀರಿಗೆಯು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದರ ಜತೆಗೆ ಪ್ರತಿರೋಧಕ ಶಕ್ತಿ ವೃದ್ಧಿಸುವುದು. ಜೀರಿಗೆಯಲ್ಲಿ ಉನ್ನತ ಮಟ್ಟದ ವಿಟಮಿನ್ ಎ ಮತ್ತು ಸಿ ಇದೆ. ಇವುಗಳು ಆಂಟಿಆಕ್ಸಿಡೆಂಟ್ ಗಳಾಗಿ ಕೆಲಸ ಮಾಡಿ ಸೋಂಕು ವಿರುದ್ಧ ಹೋರಾಡುವುದು.
ಖಾಲಿ ಹೊಟ್ಟೆಯಲ್ಲ ಜಲ ಜೀರ ಕುಡಿದರೆ ಅದರಿಂದ ತೂಕ ಇಳಿಸಲು ತುಂಬಾ ಸಹಕಾರಿ ಆಗಲಿದೆ. ಯಾಕೆಂದರೆ ಇದರಲ್ಲಿ ಆಹಾರದ ನಾರಿನಾಂಶವು ಹೆಚ್ಚಾಗಿದೆ ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿ ಆಗಲು ನೆರವಾಗುವುದು.
ಜೀರಗೆಯಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ. ಜೀರಿಗೆಯು ಚಯಾಪಚಯವನ್ನು ಹೆಚ್ಚಿಸಿ ಕ್ಯಾಲರಿ ದಹಿಸುವಂತೆ ಮಾಡುವುದು ಮತ್ತು ವೇಗವಾಗಿ ತೂಕ ಇಳಿಸಲು ಇದು ಸಹಕಾರಿ ಆಗಿರುವುದು.
ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣ ಹೊಂದಿರುವಂತಹ ಜೀರಿಗೆಯು ಉಸಿರಾಟದ ಸಮಸ್ಯೆಗೆ ತುಂಬಾ ಪರಿಣಾಮಕಾರಿ ಮನೆ ಮದ್ದು ಆಗಿದೆ.
ಇದು ಅಸ್ತಮಾ ಮತ್ತು ಬ್ರಾಂಕೈಟಿಸ್ ಗೆ ಪರಿಣಾಮಕಾರಿ ಆಗಿರುವುದು. ಕಫಗಟ್ಟುವುದನ್ನು ನಿವಾರಿಸು ವಂತಹ ಅಂಶವು ಜೀರಿಗೆಯಲ್ಲಿದೆ ಮತ್ತು ಇದು ಉಸಿರಾಟದ ವ್ಯವಸ್ಥೆಯನ್ನು ಕಫ ನಿಲ್ಲುವುದನ್ನು ತಡೆಯುವುತ್ತದೆ.
ಜೀರಿಗೆಯಲ್ಲಿ ಇರುವಂತಹ ಕೆಲವೊಂದು ಸಾರಭೂತ ಎಣ್ಣೆಗಳು ವೈರಲ್ ಸೋಂಕಿನಿಂದಾಗಿ ಉಂಟಾಗುವ ಸಾಮಾನ್ಯ ಶೀತದಿಂದ ಕಾಪಾಡುವುದು. ಜೀರಿಗೆಯಲ್ಲಿ ಇರುವ ವಿಟಮಿನ್ ಸಿ ಪ್ರತಿರೋಧಕ ವ್ಯವಸ್ಥೆ ಬಲಪಡಿಸಲು ತುಂಬಾ ಪರಿಣಾಮಕಾರಿ ಮನೆಮದ್ದು ಆಗಿದೆ.