ಹೊಸದಿಗಂತ ಡಿಜಿಟಲ್ ಡೆಸ್ಕ್:
70ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ನಡೆಯಲಿದೆ. ಎಲ್ಲಾ ಚಿತ್ರರಂಗದ ಕಲಾವಿದರು ಇದರಲ್ಲಿ ಭಾಗಿ ಆಗಲಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಹಾಗೂ ರಾಷ್ಟ್ರ ಪ್ರಶಸ್ತಿಗಳ ಪ್ರದಾನ ಇಂದು ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅವಾರ್ಡ್ನ ನೀಡಲಿದ್ದಾರೆ. ದೆಹಲಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
70ನೇ ಸಾಲಿನ ರಾಷ್ಟ್ರ ಪ್ರಶಸ್ತಿಯನ್ನು ಆಗಸ್ಟ್ 16ರಂದು ಘೋಷಣೆ ಮಾಡಲಾಯಿತು. ಇಂದು ಪ್ರಶಸ್ತಿ ಪ್ರದಾನ ಆಗಲಿದೆ. ದೆಹಲಿಯ ವಿಜ್ಞಾನ್ ಭವನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಅವಾರ್ಡ್ ವಿನ್ನರ್ಗಳ ಜೊತೆ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಈ ಅವಾರ್ಡ್ ಕಾರ್ಯಕ್ರಮ ಆರಂಭ ಆಗಲಿದೆ. ಡಿಡಿ ನ್ಯೂಸ್ ಚಾನೆಲ್ನ ಯೂಟ್ಯೂಬ್ ಚಾನೆಲ್ನಲ್ಲಿ ನೀವು ಇದನ್ನು ಉಚಿತವಾಗಿ ವೀಕ್ಷಣೆ ಮಾಡಬಹುದು.
ಕನ್ನಡದ ಪಾಲಿಗೆ ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿ ವಿಶೇಷ ಎನಿಸಿಕೊಂಡಿದೆ. ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದ ನಟನೆಗೆ ‘ಅತ್ಯುತ್ತಮ ನಟ’ ಅವಾರ್ಡ್ ಸಿಕ್ಕಿದೆ. ಅದೇ ರೀತಿ ‘ಕಾಂತಾರ’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಅವರು ಸಮಾರಂಭದಲ್ಲಿ ಭಾಗಿ ಆಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಉಳಿದಂತೆ ಮಾನಸಿ ಪರೇಖ್, ನಿತ್ಯಾ ಮೆನನ್, ಅರಿಜಿತ್ ಸಿಂಗ್, ನೀನಾ ಗುಪ್ತಾ, ಎಆರ್ ರೆಹಮಾನ್, ಮನೋಜ್ ಬಾಜ್ಪಾಯಿ, ಮಿಥುನ್ ಚಕ್ರವರ್ತಿ ಮೊದಲಾದವಾರು ಇದರಲ್ಲಿ ಭಾಗಿ ಆಗಲಿದ್ದಾರೆ.