ಮೇಘನಾ ಶೆಟ್ಟಿ ಶಿವಮೊಗ್ಗ
ಆತ ರೈಲಿಗಾಗಿ ಕಾಯುತ್ತಾ ನಿಂತಿರುತ್ತಾನೆ, ಪಕ್ಕದಲ್ಲೇ ತುಂಬಾ ವಯಸ್ಸಾದವರಲ್ಲ, ಒಂದು ಐವತ್ತರ ಆಸುಪಾಸಿನ ವ್ಯಕ್ತಿ ಹಾಗೂ ಅವರ ಮಗಳು ನಿಂತಿರುತ್ತಾಳೆ. ಹದಿನೈದು ನಿಮಿಷ ಕಾದ ನಂತರ ಟ್ರೈನ್ ಬಂದು ತನ್ನ ಸ್ಟಾಪ್‌ನಲ್ಲಿ ನಿಲ್ಲುತ್ತದೆ. ಆತ ವಾಟರ್ ಬಾಟಲ್ ಮರೆತುಹೋದ ಕಾರಣ ತಕ್ಷಣ ಅಂಗಡಿ ಕಡೆ ಓಡುತ್ತಾನೆ. ಅಂಕಲ್ ಹಾಗೂ ಅವರ ಮಗಳು ರೈಲು ಹತ್ತಿ ಕುಳಿತುಕೊಳ್ಳುತ್ತಾರೆ. ಆಕೆಗೆ ವಿಂಡೋ ಸೀಟ್ ಬೇಕೆಂದು ಅಪ್ಪ ಮಗಳನ್ನು ಕೂರಿಸಿ ಪಕ್ಕದಲ್ಲಿ ಕುಳಿತಿರುತ್ತಾನೆ. ಅವಳೇನು ಸಣ್ಣ ಮಗು ಅಲ್ಲ, ಕಾಲೇಜು ಮುಗಿಸಿ ಕೆಲಸ ಹುಡುಕಲು ಬೆಂಗಳೂರಿಗೆ ಬರುತ್ತಿದ್ದವಳು.
ಅವನು ಬಾಟಲಿ ತೆಗೆದುಕೊಂಡು ರೈಲು ಹತ್ತೋದಕ್ಕೆ ರೈಲು ಮುಂದಕ್ಕೆ ಹೋಯ್ತು, ಉಫ್ ಎಂದು ಉಸಿರುಬಿಡುತ್ತಾ, ಕೈಯಲ್ಲಿ ಟಿಕೆಟ್ ಹಿಡಿದು ತನ್ನ ಸೀಟ್ ಬಳಿ ಬರ್ತಾನೆ. ನೋಡಿದ್ರೆ ಅದೇ ಅಂಕಲ್ ಹಾಗೂ ಮಗಳು ಕುಳಿತಿದ್ದಾರೆ. ಅಂಕಲ್ ಕೂತಿದ್ದ ಸೀಟ್ ಅವನದ್ದಾಗಿರುತ್ತದೆ. “ಅಂಕಲ್ ಇದು ನನ್ನ ಸೀಟ್” ಎಂದು ಆತ ಹೇಳುತ್ತಾನೆ, ಅದಕ್ಕೆ ಅಂಕಲ್ ” ಓ ಹೌದು, ಬಟ್ ನಮ್ದು ಇದೇ ಬೋಗಿನೇ, if you dont mind ನನ್ನ ಸೀಟ್‌ನಲ್ಲಿ ಕೂರ್ತಿರಾ? ನನಗೂ ಮಗಳಿಗೂ ಬೇರೆ ಬೇರೆ ಕಡೆ ಸೀಟ್ ಸಿಕ್ಬಿಟ್ಟಿದೆ” ಎಂದು ಹೇಳುತ್ತಾನೆ.
ಅದಕ್ಕೆ ಆತ ಒಕೆ ಎಂದು ಹೇಳಿ ಅಂಕಲ್ ಸೀಟ್ ಬಳಿ ಹೋಗುತ್ತಾನೆ, ಇಬ್ಬರು ಆಂಟಿಗಳ ಮಧ್ಯದ ಸೀಟ್ ಅದಾಗಿರುತ್ತದೆ. ಆದರೂ ಬಿಡು ಹೋಗಲಿ ಎಂದು ಹೇಳಿ ಮಧ್ಯ ಕೂರುತ್ತಾನೆ. ಎರಡೂ ಕಡೆಯ ಕೈಗಳನ್ನು ಮಧ್ಯಕ್ಕೆ ಹಿಡಿದುಕೊಂಡು ಕಷ್ಟಪಟ್ಟು ಹಿಂಸೆಯಿಂದ ಕೂರುತ್ತಾನೆ. ಒಂದೆರಡು ನಿಮಿಷ ಅಷ್ಟೆ, ಇಷ್ಟವಾಗದೇ ಮತ್ತದೇ ಅಂಕಲ್ ಬಳಿ ಬಂದು” ನನ್ನ ಸೀಟ್ ನನಗೆ ಬಿಡಿ, ನಿಮ್ಮ ಸೀಟ್‌ಗೆ ನೀವು ಹೋಗಿ” ಎಂದು ಹೇಳುತ್ತಾನೆ.
ಆಗ ಅಂಕಲ್” ಯಾಕಪ್ಪ ಇಷ್ಟು ಅಡ್ಜಸ್ಟ್ ಮಾಡ್ಕೊಳಕೆ ಆಗಲ್ವಾ? ಈಗಿನ ಕಾಲದ ಹುಡುಗರಿಗೆ ದೊಡ್ಡವರನ್ನು ರೆಸ್ಪೆಕ್ಟ್ ಮಾಡೋಕೆ ಬರೋದಿಲ್ಲ, ಸ್ವಲ್ಪನೂ ಸಮಸ್ಯೆ ಆಗ್ಬಾರ್ದು, ಎಲ್ಲಾದಕ್ಕೂ ಕಂಫರ್ಟ್ ಬೇಕು” ಎಂದು ರೇಗ್ತಾರೆ. ಇಷ್ಟು ಹೊತ್ತು ಸೌಮ್ಯವಾಗಿದ್ದ ಆತನ ತಾಳ್ಮೆಯ ಕಟ್ಟೆ ಒಡೆದುಹೋಗುತ್ತದೆ. ” ಅಂಕಲ್ ಹೌದು, ನಾನು ಈಗಿನ ಕಾಲದ ಹುಡುಗನೇ, ನನ್ನ ಕಂಫರ್ಟ್‌ಗಾಗಿ ಕಾದು ಟಿಕೆಟ್ ಬುಕ್ ಮಾಡಿಕೊಂಡು ಟ್ರಾವೆಲ್ ಮಾಡ್ತಿದ್ದೇನೆ, ಅದನ್ನು ನೀವ್ಯಾಕೆ ಮಾಡಿಲ್ಲ. ನಿಮಗೆ ಯಾವ ಜಾಗ ಸಿಕ್ಕಿದೆಯೋ ಅಲ್ಲಿ ಕೂರಿ, ನನ್ನ ಸೀಟ್ ಇದ್ದರೂ ನಾನ್ಯಾಕೆ ಅನ್‌ಕಂಫರ್ಟಬಲ್ ಆಗಿ ಇಬ್ಬರು ಲೇಡೀಸ್ ಮಧ್ಯ ಕೂರ್ಬೇಕು? ನೀವು ದೊಡ್ಡವರೋ ಸಣ್ಣವರೋ ನಮಗೆ ಅದೆಲ್ಲಾ ಬೇಡ, Respect is mutual’ಎಂದು ಹೇಳಿ ಅಂಕಲ್‌ನ್ನು ಎಬ್ಬಿಸ್ತಾನೆ!
ಈ ಹಿಂದೆ ಹೀಗೆ ಇದ್ದದ್ದು, ಆದರೆ ಈಗ ಮಕ್ಕಳ ಬೆಳೆಸುವ ಬಗೆ ಬದಲಾಗಿದೆ. ದೊಡ್ಡವರು ಹೇಳಿದ್ದೆಲ್ಲಾ ರೈಟ್ ಎಂದು ಮಕ್ಕಳು ಆಲೋಚಿಸೋದಿಲ್ಲ. ಅವರು ಎಷ್ಟೇ ಸಣ್ಣವರಾದ್ರೂ ಅವರನ್ನೂ ಒಬ್ಬ Indivisual ಆಗಿ ಕನ್ಸಿಡರ್ ಮಾಡ್ಲೇಬೇಕಿದೆ. ಸ್ಟ್ರಾಂಗ್ ಮೆಂಟಾಲಿಟಿ ಹೊಂದಿರುವ, ಕಾನ್ಫಿಡೆಂಟ್ ಆಗಿರುವ ಮಕ್ಕಳನ್ನು ಬೆಳೆಸೋದಕ್ಕೆ ಮೊದಲು ನೀವು ಅವರನ್ನು ರೆಸ್ಪೆಕ್ಟ್ ಮಾಡಿ. ಎಂದಾದರೂ ಮಕ್ಕಳು ನಿಮ್ಮ ಮೇಲೆ ರೇಗಿದರೆ, ಕರೆದು ನಿಧಾನಕ್ಕೆ” ನೀನು ನನ್ನ ಮೇಲೆ ರೇಗುವಂತಿಲ್ಲ, ದೊಡ್ಡ ದನಿಯಲ್ಲಿ ಮಾತನಾಡುವಂತಿಲ್ಲ, ರೆಸ್ಪೆಕ್ಟ್ ಮಾಡಬೇಕು” ಎಂದು ಹೇಳಿಕೊಡಿ.
ಈ ರೀತಿ ಹೇಳಿಕೊಟ್ಟಾಗ ಇನ್ಯಾರೂ ನಿಮ್ಮ ಮಕ್ಕಳ ಮೇಲೆ ದೌರ್ಜನ್ಯದ ರೀತಿ ಮಾತನಾಡೋದಿಲ್ಲ. ಮಾತನಾಡಿದರೂ ಅದು OK ಅಲ್ಲ ಅನ್ನೋದು ಮಕ್ಕಳಿಗೆ ತಿಳಿಯುತ್ತದೆ. ತಾವೂ ದೊಡ್ಡ ದನಿಯಲ್ಲಿ ಯಾರ ಮೇಲೂ ಮಾತನಾಡಬಾರದು ಎಂದು ಅನಿಸುತ್ತದೆ.
ಮಕ್ಕಳು ಮೆಂಟಲಿ ಸ್ಟ್ರಾಂಗ್ ಆಗಿ ಬೆಳೆಯೋದಕ್ಕೆ ಹೀಗೆ ಮಾಡಿ..
ಸಮಸ್ಯೆ ಬಂದಾಗ ಕಿರುಚಿ ಕೂಗಾಡದೆ, ನಿಭಾಯಿಸೋದನ್ನು ಹೇಳಿಕೊಡಿ. ಸಣ್ಣ ಗಂಟು ಬಿಡಿಸುವುದು ಕೂಡ ಅವರ ಪ್ರಕಾರ ಸಮಸ್ಯೆಯೇ. ಕಾನ್ಫಿಡೆನ್ಸ್ ಬೂಸ್ಟ್ ಮಾಡಿ.
ಕೆಲವೊಮ್ಮೆ ತಮ್ಮ ಎಮೋಷನ್ಸ್‌ಗೆ ಕಂಟ್ರೋಲ್ ಇಲ್ಲದ ರೀತಿ ಮಕ್ಕಳು ನಡೆದುಕೊಳ್ಳುತ್ತಾರೆ. ಅವರು ಕೂಲ್ ಆದ ನಂತರ ಟ್ರಿಗರ್ ಆಗಿದ್ದು ಯಾಕೆ? ಅದನ್ನು ಹೇಗೆ ನಿಭಾಯಿಸಬಹುದಿತ್ತು ಹೇಳಿಕೊಡಿ.
ನೀವೇ ರೋಲ್ ಮಾಡೆಲ್ ಆಗಿರಿ. ನಿಮ್ಮ ಭಾವನೆಗಳನ್ನು ಮಕ್ಕಳಿಗೆ ಅರ್ಥವಾಗುವಂತೆ ತಿಳಿಸಿ, ಕೋಪ ಬಂದಿದ್ದರೂ ಅದನ್ನು ಬೇರೆ ರೀತಿ ಚಾನಲೈಸ್ ಮಾಡುವುದನ್ನು ಕಲಿಸಿ. ಉದಾಹರಣೆಗೆ ಈ ಬಾರಿ ಕಡಿಮೆ ಅಂಕ ಬಂದಿದೆ, ಬಟ್ ಇಟ್ಸ್ ಒಕೆ, ಈಗ ಟಿವಿ ನೋಡೋ ಬದಲು ಆಟಕ್ಕೆ ಹೋಗ್ತೇನೆ ಹೀಗೆ ಹೇಳಿ..
ಮಕ್ಕಳು ಓವರ್ ಕಾನ್ಫಿಡೆಂಟ್ ಆಗೋದು ಬೇಡ, ಬಟ್ ಕಾನ್ಫಿಡೆನ್ಸ್ ಬರೋ ರೀತಿ ರಿಯಾಲಿಟಿ ತಿಳಿಸಿ.
ಒಬ್ಬೊಬ್ಬರೆ ಮಾತನಾಡೋರೆಲ್ಲ ಹುಚ್ಚರಲ್ಲ. ಕನ್ನಡಿ ಮುಂದೆ ನಿಂತು ಸಕ್ಸಸ್ ಬಗ್ಗೆ ಮಾತನಾಡೋದನ್ನು ಕಲಿಸಿ, ಪ್ರಾಕ್ಟೀಸ್ ಮಾಡೋದನ್ನು ಹೇಳಿಕೊಡಿ.
ಎಮೋಷನಲ್ ಬ್ರೇಕ್‌ಡೌನ್ ಅಥವಾ ಯಾರ ಮೇಲಾದರೂ ಅತಿಯಾದ ಕೋಪ ಬಂದು ಹೊಡೆಯಬೇಕು ಎನಿಸಿದರೆ, ಆ ಸಮಯದಲ್ಲಿ ಒಂದೆರದು ದೀರ್ಘವಾದ ಉಸಿರಾಟ ಮಾಡೋದಕ್ಕೆ ಹೇಳಿಕೊಡಿ.
ಅವರ ಭಯವನ್ನು ಓಡಿಸಿ, ನೀರು ಅಂದ್ರೆ ಭಯ, ಒಕೆ ನೀರಿನಲ್ಲಿ ಸೇಫ್ ಆಗಿ ನಿಧಾನಕ್ಕೆ ಆಡಬಹುದು ಎಂದು ತೋರಿಸಿಕೊಡಿ.