ಕೋವಿಡ್ ವ್ಯಾಕ್ಸಿನ್ ಪಡೆದವರ ಮೇಲೆ ಅಡ್ಡಪರಿಣಾಮ: ಸುಪ್ರೀಂಗೆ ಸಲ್ಲಿಸಿದ್ದ ಪಿಐಎಲ್ ವಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ಲಸಿಕೆ ಅಡ್ಡಪರಿಣಾಮ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಈ ಲಸಿಕೆಗಳಿಂದ ಜನರಿಗೆ ಸಾಕಷ್ಟು ಅಡ್ಡಪರಿಣಾಮಗಳಾಗಿವೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಜೆ.ಬಿ.ಪಾರ್ದಿವಾಲ್ ಅವರಿದ್ದ ಪೀಠ, ಈ ಅರ್ಜಿಯ ಪ್ರಯೋಜನ ಏನು? ಎಂದು ಪ್ರಶ್ನಿಸಿದ್ದು, ಲಸಿಕೆ ಪಡೆಯದಿದ್ದರೆ ಅದರ ಪರಿಣಾಮಗಳು ಏನು ಎಂಬುದನ್ನು ನೀವು ಬಲ್ಲಿರಾ? ಎಂದು ಪ್ರಶ್ನಿಸಿತು. ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳಲು ಬಯಸುವುದಿಲ್ಲ. ಆದರೆ, ಇದು ಪ್ರಚಾರ ಪಡೆಯಲು ಸಲ್ಲಿಸಿದ ಅರ್ಜಿ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಸಾಂಕ್ರಾಮಿಕ ಬಿಕ್ಕಟ್ಟನ್ನು ನಿವಾರಿಸಲು ಲಸಿಕೆಗಳು ಜಾಗತಿಕವಾಗಿ ನೆರವು ನೀಡಿವೆ. ಈಗ ಅಂತಹ ಅರ್ಜಿಗಳನ್ನು ಸಲ್ಲಿಸುವುದು ಸೂಕ್ತವಲ್ಲ ಎಂದ ಪೀಠ, ಪಿಐಎಲ್‌ನ್ನು ವಜಾಗೊಳಿಸಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!