ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಹಾಗೂ ಗ್ಯಾಂಗ್‌ನಿಂದ ಕೊಲೆಯಾಗಿದ್ದಾರೆ ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ರೇಣುಕಾಸ್ವಾಮಿ ಮರ್ಡರ್ ಆದಾಗ ಸಹನಾಗೆ ಐದು ತಿಂಗಳಾಗಿದ್ದು, ಹುಟ್ಟುವ ಮಗುವಿಗೆ ತಂದೆ ಎಂದು ಯಾರನ್ನು ತೋರಿಸಲಿ ಎಂದು ಸಹನಾ ಕಣ್ಣೀರಿಟ್ಟಿದ್ದರು. ಇದೀಗ ಮನೆಗೆ ಗಂಡುಮಗುವಿನ ಆಗಮನವಾಗಿದ್ದು, ತಮ್ಮ ಮಗುವೇ ವಾಪಾಸ್ ಬಂದಿದೆ ಎಂದು ರೇಣುಕಾಸ್ವಾಮಿ ಪೋಷಕರು ಹೇಳಿದ್ದಾರೆ.
ದರ್ಶನ್ ಆಪ್ತೆ ಪವಿತ್ರಾಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಇದರಿಂದ ಕೋಪಗೊಂಡ ಪವಿತ್ರಾ ಈ ವಿಚಾರವನ್ನು ದರ್ಶನ್‌ಗೆ ಹೇಳಿದ್ದರು. ಅದರಿಂದ ರೇಣುಕಾಸ್ವಾಮಿಯನ್ನು ಪಟ್ಟಣಗೆರೆಯ ಶೆಡ್‌ಗೆ ಕರೆಸಿ ಹೊಡೆದು ಕೊಂದಿದ್ದಾರೆ ಎನ್ನಲಾಗಿದೆ. ಮರ್ಡರ್ ಕೇಸ್ ಸದ್ಯ ಕೋರ್ಟ್‌ನಲ್ಲಿದೆ.