ಬೆಚ್ಚಿಬೀಳಿಸಿದೆ ಸಂಶೋಧನಾ ವರದಿ: ಏನಿದು ನವಜಾತ ಶಿಶುಗಳ ಹೃದಯ, ಮೆದುಳಲ್ಲಿ ಪತ್ತೆಯಾದ ಅಂಶ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನವಜಾತ ಶಿಶುಗಳ ಶ್ವಾಸಕೋಶ, ಹೃದಯ, ಮೆದುಳಿನಲ್ಲಿ ಪ್ಲಾಸ್ಟಿಕ್​ ಪತ್ತೆಯಾಗಿದೆ, ಸಂಶೋಧನೆಯ ವರದಿಯು ಬೆಚ್ಚಿಬೀಳಿಸುವಂತಿದೆ.  ಗರ್ಭಿಣಿಯರಿಂದ ತಮಗೆ ಹುಟ್ಟಲಿರುವ ಮಗುವಿಗೆ ಮೈಕ್ರೋಪ್ಲಾಸ್ಟಿಕ್ ರವಾನೆಯಾಗಬಹುದು ಎಂದು ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ.

ನವಜಾತ ಇಲಿಗಳ ಮೇಲೆ ಮಾಡಿದ ಸಂಶೋಧನೆಯಲ್ಲಿ ಶ್ವಾಸಕೋಶಗಳು, ಹೃದಯಗಳು, ಯಕೃತ್ತುಗಳು, ಮೂತ್ರಪಿಂಡಗಳು ಮತ್ತು ಮೆದುಳಿನಲ್ಲಿ ಸಣ್ಣ ಪ್ಲಾಸ್ಟಿಕ್ ತುಣುಕುಗಳು ನಿಜವಾಗಿಯೂ ಇರುತ್ತವೆ ಎಂಬುದು ತಿಳಿದುಬಂದಿದೆ.ರಟ್ಜರ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಹೊಸ ಅಧ್ಯಯನದಲ್ಲಿ ಬಹಿರಂಗಪಡಿಸಿದ್ದಾರೆ.

ಈ ಸಂಶೋಧನೆ ಮೂಲಕ, ಗರ್ಭಾವಸ್ಥೆಯಲ್ಲಿ ಮೈಕ್ರೋಪ್ಲಾಸ್ಟಿಕ್​ಗಳು ಹೊಕ್ಕುಳಬಳ್ಳಿ ಮೂಲಕ ಬೆಳೆಯುತ್ತಿರುವ ಭ್ರುಣವನ್ನು ಸೇರುತ್ತವೆ. ಇದರಿಂದಾಗಿ ನವಜಾತ ಶಿಶುಗಳು ದೀರ್ಘಕಾಲ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

ಮೈಕ್ರೋ ಹಾಗೂ ನ್ಯಾನೊ ಪ್ಲಾಸ್ಟಿಕ್​ಗಳು ಮಾನವನ ದೇಹದಲ್ಲಿ ಸುಲಭವಾಗಿ ಸೇರಿಕೊಳ್ಳುತ್ತವೆ, ಉಸಿರಾಟ ಹಾಗೂ ಆಹಾರದ ಮೂಲಕ ಈ ಮಾಲಿನ್ಯಕಾರಕಗಳು ಹೊಕ್ಕುಳಬಳ್ಳಿ ದಾಟಿ ಮಗುವಿನ ದೇಹದೊಳಗೆ ಸೇರುತ್ತವೆ.

ಜನನದ ಬಳಿಕ ಈ ಕಣಳು ಅಂಗಾಂಶಗಳಲ್ಲಿಯೇ ಉಳಿದಿವೆಯೇ ಎಂಬುದು ಅಸ್ಪಷ್ಟವಾಗಿದೆ, ಇಲಿಗಳ ಮೇಲೆ ಮಾಡಿದ ಸಂಶೋಧನೆಯಲ್ಲಿ ಗರ್ಭಾವಸ್ಥೆಯಲ್ಲಿ ತಾಯಿ ಇಲಿ ಉಸಿರಾಡುವ ಒಂದೇ ರೀತಿಯ ಪ್ಲಾಸ್ಟಿಕ್ ಮರಿ ಇಲಿಗಳ ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ, ಹೃದಯ ಮತ್ತು ಮೆದುಳಿನ ಅಂಗಾಂಶಗಳಲ್ಲಿ ಕಂಡುಬಂದಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!