ನೈಜೀರಿಯಾದಲ್ಲಿ ಭಯಂಕರ ಅಪಘಾತ, ಟ್ಯಾಂಕರ್‌ ಸ್ಫೋಟಗೊಂಡು 147 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ನೈಜೀರಿಯಾದಲ್ಲಿ ಇಂಧನ ಟ್ಯಾಂಕರ್ ಸ್ಫೋಟಗೊಂಡು 147 ಜನರು ಸಾವನ್ನಪ್ಪಿದ್ದಾರೆ. 70 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಗಾವಾ ರಾಜ್ಯದ ಮಜಿಯಾ ಎಂಬ ಹಳ್ಳಿಯಲ್ಲಿ ತಡರಾತ್ರಿ ವಾಹನ ಅಪಘಾತಕ್ಕೀಡಾಗಿತ್ತು. ಸ್ಥಳೀಯರು ಇಂಧನವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಗ ಸ್ಫೋಟವು ಸಂಭವಿಸಿದೆ. ಸ್ಫೋಟದಿಂದ ಮೃತಪಟ್ಟವರನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ.

Fuel tanker blast leaves 147 dead in Nigeria

ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿತ್ತು. ಒಳಚರಂಡಿ ಕಂದಕಕ್ಕೆ ಇಂಧನ ಚೆಲ್ಲಿತ್ತು. ಸ್ಥಳೀಯ ನಿವಾಸಿಗಳು ಇಂಧನ ತೆಗೆದುಕೊಳ್ಳುತ್ತಿದ್ದಾಗ ಟ್ಯಾಂಕರ್‌ ಸ್ಫೋಟಗೊಂಡಿದೆ ಎಂದು ಜಿಗಾವಾ ಪೊಲೀಸ್ ವಕ್ತಾರ ಶಿಸು ಲಾವನ್ ಆಡಮ್ ಹೇಳಿದ್ದಾರೆ.

ನೈಜೀರಿಯಾದ ಉಪಾಧ್ಯಕ್ಷ ಕಾಶಿಮ್ ಶೆಟ್ಟಿಮಾ ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ. ಈ ದುರ್ಘಟನೆಯು ನಮ್ಮೆಲ್ಲರ ಹೃದಯ ಛಿದ್ರಗೊಳಿಸಿದೆ. ಫೆಡರಲ್ ಸರ್ಕಾರವು ಜಿಗವಾ ಜನರೊಂದಿಗೆ ನಿಂತಿದೆ. ಗಾಯಗೊಂಡವರಿಗೆ ನೆರವಾಗಲು ಮತ್ತು ಈ ವಿಪತ್ತಿನಿಂದ ಪೀಡಿತ ಕುಟುಂಬಗಳಿಗೆ ಸಹಾಯ ಮಾಡಲು ನಾವು ಎಲ್ಲಾ ಅಗತ್ಯ ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!