ಭಾರತೀಯ ಮೂಲದ ಸ್ವಿಸ್ ಉದ್ಯಮಿಯ ಮಗಳು ಉಗಾಂಡಾದಲ್ಲಿ ಅಕ್ರಮ ಬಂಧನ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮೂಲದ ಸ್ವಿಸ್ ಉದ್ಯಮಿ ಪಂಕಜ್ ಓಸ್ವಾಲ್ ಅವರ ಮಗಳನ್ನು ಉಗಾಂಡಾದಲ್ಲಿ ಬಂಧಿಸಲಾಗಿದೆ. ಮಧ್ಯಪ್ರವೇಶಿಸುವಂತೆ ಓಸ್ವಾಲ್ ವಿಶ್ವಸಂಸ್ಥೆಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ವಸುಂಧರಾ ಓಸ್ವಾಲ್ (26) ಅವರನ್ನು ಉಗಾಂಡಾದ ಓಸ್ವಾಲ್‌ನ ಎಕ್ಸ್‌ಟ್ರಾ-ನ್ಯೂಟ್ರಲ್ ಆಲ್ಕೋಹಾಲ್ (ENA) ಸ್ಥಾವರದಿಂದ ಅ.1 ರಂದು ಬಂಧಿಸಲಾಗಿತ್ತು. ಅವರನ್ನು ಸುಮಾರು 20 ಶಸ್ತ್ರಸಜ್ಜಿತ ಪೊಲೀಸರು ಯಾವುದೇ ವಾರಂಟ್ ತೋರಿಸದೆ ಬಂಧಿಸಿದ್ದಾರೆ. ಅವರ ಬಂಧನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಮಧ್ಯೆ ಪ್ರವೇಶಿಸುವಂತೆ ಈ ವಾರದ ಆರಂಭದಲ್ಲಿ ಯುನೈಟೆಡ್ ನೇಷನ್ಸ್ ವರ್ಕಿಂಗ್ ಗ್ರೂಪ್ ಆನ್ ಆರ್ಬಿಟ್ರರಿ ಡಿಟೆನ್ಶನ್‌ಗೆ (WGAD) ಪಂಕಜ್ ಓಸ್ವಾಲ್ ತುರ್ತು ಮನವಿ ಸಲ್ಲಿಸಿದ್ದರು.

WGAD ಎಂಬುದು ಮಾನವ ಹಕ್ಕುಗಳ ಕೌನ್ಸಿಲ್‌ನಿಂದ ನೇಮಕಗೊಂಡ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ತಜ್ಞರ ಸಂಸ್ಥೆಯಾಗಿದೆ.

ವಸುಂಧರಾ ಅವರ ಇನ್ಸ್ಟಾಗ್ರಾಮ್‌ನಲ್ಲಿ ಅವರ ʻಕಾನೂನುಬಾಹಿರ ಬಂಧನʼ ವಿಚಾರವನ್ನು ಪೋಸ್ಟ್‌ ಮಾಡಲಾಗಿದೆ. ನೆಲದ ಮೇಲೆ ರಕ್ತ ಮತ್ತು ಗಲೀಜಾಗಿರುವ ಶೌಚಾಲಯದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಬಂಧನದ ವೇಳೆ 90 ಗಂಟೆಗಳಿಗೂ ಹೆಚ್ಚು ಕಾಲ ಶೂಗಳಿಂದ ತುಂಬಿದ ಕೋಣೆಯಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಲಾಗಿದೆ. ಸುಮಾರು ಐದು ದಿನಗಳವರೆಗೆ ಸ್ನಾನ ಮಾಡಲು ಅಥವಾ ಬಟ್ಟೆ ಬದಲಾಯಿಸಲು ಅನುಮತಿಸಲಿಲ್ಲ. ಇಷ್ಟೇ ಅಲ್ಲದೇ ಶುದ್ಧ ನೀರು ಮತ್ತು ಸರಿಯಾದ ಆಹಾರ ನಿರಾಕರಿಸಲಾಗಿದೆ. ಮಲಗಲು ಸಣ್ಣ ಬೆಂಚ್ ನೀಡಲಾಗಿದೆ ಎಂದು ಪೊಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ವಸುಂಧರಾ ಅವರಿಗೆ ಸಸ್ಯಾಹಾರ ಆಹಾರವನ್ನು ನಿರಾಕರಿಸಲಾಗಿದೆ. ಅವರ ಕುಟುಂಬ ಮತ್ತು ವಕೀಲರಿಗೆ ಭೇಟಿಯನ್ನೂ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.

ಓಸ್ವಾಲ್ ಅವರ ಹಣವನ್ನು ಸುಲಿಗೆ ಮಾಡಲು ಮತ್ತು ಅವರ ಹೆಸರನ್ನು ಕೆಡಿಸಲು ಈ ರೀತಿ ಮಾಡಲಾಗಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಅಧಿಕಾರಿಗಳು ಅವಳನ್ನು ಬಿಡುಗಡೆ ಮಾಡಲಿಲ್ಲ ಎಂದು ಅವರ ಸಹೋದರ ಹೇಳಿಕೊಂಡಿದ್ದಾರೆ.

ಬಾಣಸಿಗ ಮುಖೇಶ್ ಕುಮಾರ್ ಮೆನಾರಿಯಾ ಅವರನ್ನು ಕೊಲ್ಲುವ ಉದ್ದೇಶದಿಂದ ಅಪಹರಣ ಮಾಡಿದ ಆರೋಪವನ್ನು ವಸುಂಧರಾ ಮತ್ತು ಅವರ ಕಂಪನಿಯ ವಕೀಲ ಎದುರಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!