ಪಾಕಿಸ್ತಾನ್‌ ಜಿಂದಾಬಾದ್‌ ಎಂದವನಿಗೆ ಷರತ್ತು ವಿಧಿಸಿ ಜಾಮೀನು: ಜೈಲಿನಿಂದ ಹೊರಬಂದು ಆತ ಏನು ಮಾಡಬೇಕು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ನಿಂತು ಪಾಕಿಸ್ತಾನ ಜಿಂದಾಬಾದ್​ಎಂದು ಹೇಳಿದ್ದ ವ್ಯಕ್ತಿಯೊಬ್ಬನಿಗೆ ಮಧ್ಯಪ್ರದೇಶ ಕೋರ್ಟ್​​ ಜಾಮೀನು ನೀಡಿದೆ. ಆದರೆ, ಜಾಮೀನು ನೀಡುವ ಮೊದಲು ಕೋರ್ಟ್ ಷರತ್ತು ವಿಧಿಸಿದ್ದು, ಇದೀಗ ಎಲ್ಲರ ಗಮನ ಸೆಳೆದಿದೆ.

ಈ ಪ್ರಕರಣ ಇತ್ಯರ್ಥವಾಗುವವರೆಗೂ ಜಾಮೀನು ಪಡೆದ ವ್ಯಕ್ತಿ ತಿಂಗಳಿಗೆ ಎರಡು ಬಾರಿ ಪೊಲೀಸ್​ ಸ್ಟೇಷನ್​​ಗೆ ಹೋಗಬೇಕು. ಪ್ರತಿಭಾರಿ ಹೋದಾಗಲೂ ಸ್ಟೇಷನ್​​ನಲ್ಲಿರುವ ಭಾರತದ ಧ್ವಜಕ್ಕೆ 21 ಬಾರಿ ಭಾರತ್​ ಮಾತಾಕೀ ಜೈ ಎಂದು ಘೋಷಣೆ ಕೂಗಬೇಕು. ಈ ರೀತಿಯ ಷರತ್ತು ವಿಧಿಸಿ ಕೋರ್ಟ್​ ಜಾಮೀನು ನೀಡಿದೆ.

ನ್ಯಾಯಮೂರ್ತಿ ದಿನೇಶ್ ಕುಮಾರ್ ಪಾಲಿವಾಲ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಫೈಜಲ್ ಪ್ರತಿ ತಿಂಗಳು ಮೊದಲ ಮಂಗಳವಾರ ಹಾಗೂ ನಾಲ್ಕನೇ ಮಂಗಳವಾರ ಭೋಪಾಲ್​ನ ಮಿಸ್ರೋದ್ ಪೊಲೀಸ್​ ಠಾಣೆಗೆ ಹೋಗಿ ಹಾಜರಾಗಬೇಕು. ಅಲ್ಲಿರುವ ತ್ರಿವರ್ಣ ಧ್ವಜಕ್ಕೆ 21 ಬಾರಿ ಸೆಲ್ಯೂಟ್ ಹೊಡೆಯುತ್ತಾ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಬೆಕು ಎಂದು ಷರುತ್ತು ವಿಧಿಸಿದ್ದಾರೆ.

ಮಧ್ಯಪ್ರದೇಶದ ಸರ್ಕಾರದ ಪರ ವಕೀಲರು ಆರೋಪಿಗೆ ಜಾಮೀನು ನೀಡಬಾರದು ಅವನ ಮೇಲೆ 14ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್​​ಗಳಿವೆ ಎಂದು ವಾದಿಸಿದ್ದರು. ಪಾಕಿಸ್ತಾನ್ ಜಿಂದಾಬಾದ್ ಹಾಗೂ ಹಿಂದೂಸ್ತಾನ್ ಮುರ್ದಾಬಾದ್ ಎಂಬ ಘೋಷಣೆ ಕೂಗುವ ಮೂಲಕ ಆತ ಎರಡು ಸಮುದಾಯಗಳ ನಡುವೆ ಶತ್ರುತ್ವ ಬೆಳೆಸಿದ್ದಾನೆ. ಇದು ದೇಶದ ಸಾರ್ವಭೌಮತೆಗೆ ದೊಡ್ಡ ಧಕ್ಕೆ ತಂದಂತಾಗುತ್ತದೆ. ಆರೋಪಿ ತಾನು ಹುಟ್ಟಿ ಬೆಳೆದ ದೇಶದ ವಿರುದ್ಧವೇ ಘೋಷಣೆ ಕೂಗಿದ್ದಾನೆ ಹೀಗಾಗಿ ಆತನಿಗೆ ಬೇಲ್ ನೀಡಬಾರದು ಎಂದು ವಾದಿಸಿದ್ದರು.

ಈ ಬಗ್ಗೆ ಮಾತನಾಡಿದ ಜಸ್ಟಿಸ್ ದಿನೇಶ್​ ಕುಮಾರ್ ಫೈಜಲ್ ಆರೋಪಿಗೆ ಕೆಲವು ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡುವುದು ಒಳ್ಳೆದಯ ಅಂತ ನನಗೆ ಅನಿಸುತ್ತಿದೆ. ಇದರಿಂದಾಗಿ ಆರೋಪಿಗೆ ಜವಾಬ್ದಾರಿಯ ಪ್ರಜ್ಞೆ ಹಾಗೂ ತಾನು ನೆಲೆಸುತ್ತಿರುವ ದೇಶದ ಬಗ್ಗೆ ಗೌರವ ಮೂಡಲು ಸಾಧ್ಯವಾಗುತ್ತದೆ ಎಂದು ಹೇಳಿ ಆರೋಪಿಗೆ ಜಾಮೀನನ್ನು ನೀಡಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!