ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯ ನಿರ್ವಹಣಾಧಿಕಾರಿ ಭಾಸ್ಕರ್ (49) ಅವರು ಮಂಗಳೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ.
ನೇರಳಕಟ್ಟೆ ಪೆರುವಾಜೆ ಬೀರಕೋಡಿ ನಿವಾಸಿಯಾಗಿರುವ ಭಾಸ್ಕರ್, ಅ.17 ರಂದು ಮಂಗಳೂರಿನಲ್ಲಿ ಬೈಕ್ ಪಯಣಿಸುತ್ತಿದ್ದ ಸಂದರ್ಭ ನ್ಯಾನೋ ಕಾರು ನಡುವೆ ಅಪಘಾತ ಸಂಭವಿಸಿತ್ತು. ತೀವ್ರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಅ.18ರ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ.