ಮೇಘನಾ ಶೆಟ್ಟಿ ಶಿವಮೊಗ್ಗ
ನಾವು ಈಗ ಹೇಗಿದ್ದೀವೋ, ನಮ್ಮ ಭಯಗಳು ಯಾವ್ಯಾವುದೋ, ನಮ್ಮ ಸ್ಟ್ರೆಂಥ್ ಯಾವುದೋ ಎಲ್ಲದಕ್ಕೂ ನಮ್ಮ ಪೇರೆಂಟ್ಸ್ ಕಾರಣ. ಬೆಳೆಯುತ್ತಾ ಎಷ್ಟೊಂದು ಸ್ಕಿಲ್ಸ್ ಹಾಗೂ ವಿಷಯಗಳನ್ನು ನಾವು ಅಡಾಪ್ಟ್ ಮಾಡಿಕೊಂಡಿರಬಹುದು. ಆದರೆ ಬೇಸಿಕ್ ಕೊಟ್ಟಿರೋದು ನಮ್ಮ ಪೋಷಕರೇ. ಇದೀಗ ನಿಮ್ಮ ಸರದಿ! ನೀವೇ ಪೋಷಕರಾದ ಮೇಲೆ ಮಕ್ಕಳನ್ನು ಹೇಗೆ ಬೆಳೆಸ್ತೀರಾ? ಪರ್ಫೆಕ್ಟ್ ಆಗಿ ಮಕ್ಕಳನ್ನು ಬೆಳೆಸೋದಕ್ಕೆ ಯಾವುದೇ ಗೈಡ್‌ಲೈನ್ಸ್ ಇಲ್ಲ. ಅವರದ್ದು ಒಂದೇ ಲೈಫ್, ಪೋಷಕರಾಗಿ ನಮ್ಮದೂ ಒಂದೇ ಲೈಫ್! ನಮ್ಮ ಚಾಯ್ಸಸ್ ಎಲ್ಲಾ ರೀತಿಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.
ನಾವು ಮಾತನಾಡೋ ರೀತಿ, ನಮ್ಮ ಟೋನ್, ನಮ್ಮ ವರ್ತನೆ, ಕೆಲಸ ಎಲ್ಲವನ್ನೂ ಮಕ್ಕಳು ಕಾಪಿ ಮಾಡ್ತಾರೆ. ಸಾಧ್ಯವಾದಷ್ಟು ಕಾಮ್ ಆಗಿರಿ. ನೀವು ನಮ್ಮನ್ನು ಗೌರವಿಸಿ, ನಾವು ನಿಮ್ಮನ್ನು ಗೌರವಿಸ್ತೇವೆ ಎನ್ನು ಕಾನ್ಸೆಪ್ಟ್ ಹೇಳಿಕೊಡಿ. ಮಕ್ಕಳನ್ನು ಕೆಲವು ಸಂದರ್ಭಗಳಲ್ಲಿ ಬೈಬೇಡಿ, ಮುದ್ದು ಮಾಡಿ, ಯಾವುದು ನೋಡಿ..
ಬೆಳಗ್ಗೆ ಎದ್ದ ತಕ್ಷಣ
ಬೆಳಗ್ಗೆ ಎದ್ದ ಕಂದಮ್ಮಗಳನ್ನು ಮುದ್ದು ಮಾಡಿ ಎಬ್ಬಿಸಿ. ಇಷ್ಟ್ ಲೇಟಾಗಿ ಏಳ್ತಾರಾ? ಸ್ಕೂಲಿಗೆ ಹೊರಡ್ಬೇಕು, ಲೇಟಾಯ್ತು ಅಂತೆಲ್ಲಾ ಕೂಗಾಡ್ಬೇಡಿ. ಎದ್ದ ಮಕ್ಕಳಿಗೆ ಮುದ್ದಾಗಿ ಗುಡ್‌ಮಾರ್ನಿಂಗ್ ಹೇಳಿ, ಒಂದೈದು ನಿಮಿಷ ಸಾಧ್ಯವಾದ್ರೆ ಅವರ ಪಕ್ಕ ನೀವೂ ಮಲಗಿ ಮಾತನಾಡಿ, ಮುದ್ದು ಮಾಡಿ ಟೈಮ್ ವೇಸ್ಟ್ ಮಾಡಿ. ನಂತರ ಉಳಿದ ಕೆಲಸ. ಮಗುಗೆ ಮನೆಯಲ್ಲಿ ಪ್ರೀತಿ ಸಿಗತ್ತೆ ಅನ್ನೋದು ಗ್ಯಾರೆಂಟಿ ಆಗಲಿ.
ಸ್ಕೂಲಿಗೆ ಹೋಗುವಾಗ
ಮಕ್ಕಳು ಸ್ಕೂಲಿಗೆ ಹೋಗುವಾಗ ಊಟ ತಿನ್ನು, ಬೈಸ್ಕೋಬೇಡ, ಎಲ್ಲಾ ಇಟ್ಕೊಂಡ್ಯ? ತರಲೆ ಮಾಡ್ಬೇಡ ಈ ರೀತಿ ಮಾತನಾಡೋ ಬದಲು, ಇವತ್ತು ಖುಷಿಯಾಗಿರು ಫ್ರೆಂಡ್ಸ್ ಜೊತೆ ಆಟ ಆಡು, ಎಂಜಾಯ್ ಮಾಡು ಶ್ರದ್ಧೆಯಿಂದ ಪಾಠ ಕೇಳು ಎಂದು ಹೇಳಿ ಮುತ್ತು ಕೊಟ್ಟು ಕಳಿಸಿ
ಸ್ಕೂಲಿಂದ ಬಂದಾಗ
ಸ್ಕೂಲಿಂದ ಬಂದ ಮಕ್ಕಳು ಯುದ್ಧದಿಂದ ಬಂದ ವ್ಯಕ್ತಿಗಳಷ್ಟೇ ಸೂಕ್ಷ್ಮ. ಸ್ಕೂಲಿಂದ ಬಂದ ನಂತರ ಸ್ಕೂಲಲ್ಲಿ ಏನಾಯ್ತು? ತರಲೆ ಮಾಡಿದ್ಯ ಎಂದೆಲ್ಲಾ ಕೇಳಬೇಡಿ. ಸ್ಕೂಲ್ ಬಗ್ಗೆ ಮಾತುಕತೆ ಬೇಡ. ಅವರಿಗೆ ಇಷ್ಟವಿದ್ರೆ ಅವರೇ ಹೇಳ್ತಾರೆ. ನೀವು ಆಫೀಸ್ ಇಂದ ಬಂದು ಮತ್ತೆ ಆಫೀಸ್ ಬಗ್ಗೆ ಮಾತಾಡೋಕೆ ಇಷ್ಟಪಡ್ತೀರಾ? ಸ್ಕೂಲಿಗೆ ಹೋಗಿದ್ದಾಗ ನಿನ್ನನ್ನು ತುಂಬಾ ಮಿಸ್ ಮಾಡ್ಕೊಂಡೆ, ಈಗ ಏನು ಆಟ ಆಡೋಣ? ಏನು ತಿಂತೀಯಾ? ಎಂದು ಕೇಳಿ. ಮಗು ಏನು ಮಾಡಿದ್ರೂ ನೀವು ಅವರನ್ನು ಫಾಲೋ ಮಾಡಿ. ಸ್ಕೂಲಲ್ಲಿ ಏನಾದ್ರೂ ಆಗ್ಲಿ ಮನೆಯಲ್ಲಿ ತುಂಬಾ ಪ್ರೀತಿ ಮಾಡೋರು ಇದ್ದಾರೆ ಅಂತ ಮಕ್ಕಳಿಗೆ ತಿಳಿಯಲಿ.
ಮಲಗುವಾಗ
ಮಲಗುವ ಮಕ್ಕಳಿಗೊಂದು ಚಂದದ ಕಥೆ ಹೇಳಿ, ನೀವು ಅವರು ಹೇಗೆ ಬಿಹೇವ್ ಮಾಡಬೇಕು ಅನ್ನೋ ಉದ್ದುದ್ದ ಸ್ಪೀಚ್ ಕೊಡಬೇಡಿ. ಬದಲಿಗೆ ಕಥೆ ಮೂಲಕ ನೀತಿ ಹೇಳಿಕೊಡಿ. ನಿಧಾನವಾದ್ರೂ ಅದನ್ನು ಅಳವಡಿಸಿಕೊಳ್ತಾರೆ. ಮುತ್ತು ಕೊಟ್ಟು ಗುಡ್‌ನೈಟ್ ಹೇಳಿ.