ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ ಅವರ ತಾಯಿ ಸರೋಜಾ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಇಂದು ಬೆಳಗ್ಗೆ ನ್ಯುಮೋನಿಯಾದಿಂದ ಕೊನೆಯುಸಿರೆಳೆದಿದ್ದ ಸರೋಜಾ ಅವರ ಅಂತ್ಯಕ್ರಿಯೆ ನೆರವೇರಿದೆ.
ಇಂದು ಸಂಜೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಹಿಂದೂ ಸಂಪ್ರದಾಯದಂತೆ ಸುದೀಪ್ ತಾಯಿಯ ಅಂತ್ಯಕ್ರಿಯೆ ನೆರವೇರಿದೆ. ತಾಯಿಯ ಅಂತಿಮ ವಿಧಿ ವಿಧಾನಗಳನ್ನು ಸುದೀಪ್ ನೆರವೇರಿಸಿದ್ದಾರೆ. ಕಾರ್ಯ ಮಾಡುವಾಗ, ಸುದೀಪ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಸುದೀಪ್ ಯಶಸ್ಸಿನ ಹಿಂದೆ ತಾಯಿಯ ಪಾತ್ರವಿತ್ತು. ಅಮ್ಮನ ಜೊತೆ ಉತ್ತಮ ಒಡನಾಟ ಹೊಂದಿದ್ದ ಸುದೀಪ್‌ಗೆ ಅವರ ನಿಧನ ಆಘಾತವುಂಟು ಮಾಡಿದೆ. ಅಗಲಿದ ಅಮ್ಮನಿಗೆ ಸುದೀಪ್ ಕಣ್ಣೀರಿನ ವಿದಾಯ ಹೇಳಿದ್ದಾರೆ.