ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರಿಂದು ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ 6,700 ಕೋಟಿ ರೂ. ಮೌಲ್ಯದ 23 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಭಾನುವಾರ ಪ್ರಧಾನಿಯವರು ನಗರದಲ್ಲಿ ಕಂಚಿ ಮಠದ ವತಿಯಿಂದ ನಡೆಯುತ್ತಿರುವ ಆರ್.ಜೆ ಶಂಕರ ನೇತ್ರಾಲಯವನ್ನು ಉದ್ಘಾಟಿಸಿ ಮಾತನಾಡಿ, ಇಂದು ಕಾಶಿಗೆ ಮಹತ್ವದ ದಿನ. ಮುಂಜಾನೆ ನಾನು ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದೆ. ಆರ್.ಜೆ ಶಂಕರ ನೇತ್ರಾಲಯವು ವೃದ್ಧರು ಮತ್ತು ಮಕ್ಕಳಿಗೆ ಸಾಕಷ್ಟು ಸಹಾಯವನ್ನು ಮಾಡುತ್ತದೆ ಎಂದರು.
ದೇಶಕ್ಕೆ ಮೂರನೇ ಬಾರಿ ಸೇವೆ ಸಲ್ಲಿಸಲು ಜನರು ನನ್ನನ್ನು ಆಶೀರ್ವದಿಸಿದ ನಂತರ, ನಾವು ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ದೇಶದಲ್ಲಿ 15 ಲಕ್ಷ ಕೋಟಿ ರೂ ಮೌಲ್ಯಕ್ಕೂ ಹೆಚ್ಚಿನ ಯೋಜನೆಗಳಿಗೆ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ ಎಂದು ಹೇಳಿದರು.