ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸುದೀಪ್ ತಾಯಿ ಸರೋಜಾ ವಿಧಿವಶರಾಗಿದ್ದಾರೆ. ಸರೋಜಾ ಅವರನ್ನು ಅತಿಯಾಗಿ ಹಚ್ಚಿಕೊಂಡಿದ್ದ ನಟ ಸುದೀಪ್‌ಗೆ ಅವರ ಅಗಲಿಕೆಯ ನೋವನ್ನು ನುಂಗಲಾಗುತ್ತಿಲ್ಲ.
ಸುದೀಪ್ ತಾಯಿಯ ಅಂತಿಮ ದರುಶನ ಪಡೆದ ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ತಾಯಿ ಅಗಲಿಕೆಯಿಂದ ಸುದೀಪ್ ತುಂಬಾ ಮನನೊಂದಿದ್ದಾರೆ. ಸುದೀಪ್ ಕೈಲಿ ಈ ನೋವು ತಡೆದುಕೊಳ್ಳೋಕೆ ಆಗ್ತಿಲ್ಲ. ಗೊತ್ತಿಲ್ಲ ಅವರು ಈ ನೋವಿಂದ ಹೊರ ಬರೋಕೆ ಎಷ್ಟು ದಿನ ಆಗುತ್ತೆ ಅಂತಾ. ಸುದೀಪ್ ಅವರು ತಮ್ಮ ತಾಯಿಯನ್ನು ಅತೀವವಾಗಿ ಹಚ್ಚಿಕೊಂಡಿದ್ದರು ಎಂದು ಹೇಳಿದರು.
ಮುಂದುವರೆದು, ನಟ ಸುದೀಪ್ ಅವರು ಪ್ರತೀ ಬಾರಿ ಶೂಟಿಂಗ್ ಹೋಗೋವಾಗ ಅವರ ತಾಯಿ ಕಾಲಿಗೆ ಬಿದ್ದು ಆಶೀರ್ವಾದ ಪಡೀತಾರೆ. ಸುದೀಪ್ ಮೊನ್ನೆ ನಂಗೆ ಒಂದು ವಿಚಾರ ಹೇಳಿಕೊಂಡಿದ್ದರು. ಮೊನ್ನೆ ನಮ್ಮಮ್ಮ ಕಾಲಿಗೆ ಬಿದ್ದು ಆಶೀರ್ವಾದ ತಗೊಂಡಿದ್ದೆ. ಆದರೆ, ಅವತ್ತು ನನಗೆ ಮತ್ತೊಮ್ಮೆ ಕಾಲಿಗೆ ಬೀಳು ಮಗನೆ ಅಂತಾ ಹೇಳಿದ್ದರು. ಆಗ ನಾನು ಅಮ್ಮನನ್ನು ಏನೂ ಕೇಳದೇ ಮತ್ತೊಮ್ಮೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದೆ. ನನ್ನಮ್ಮ ಯಾವತ್ತೂ ನನ್ನ ಬಳಿ ಆ ತರಹ ಕೇಳಿರಲಿಲ್ಲ. ಯಾಕೆ ಎರಡು ಬಾರಿ ಆಶೀರ್ವಾದ ಪಡೆಯಲು ಹೇಳಿದರು ಗೊತ್ತಿಲ್ಲ ಅಂತಾ ಹೇಳಿದ್ದರು. ಇದಾಗಿ ಎರಡೇ ದಿನದಲ್ಲಿ ಹೀಗಾಗಿದೆ. ನಿಜವಾಗಿ ಹೇಳಬೇಕೆಂದರೆ ಸುದೀಪ್‌ಗೆ ಈ ನೋವು ತಡೆದುಕೊಳ್ಳೋಕೆ ಆಗುತ್ತಿಲ್ಲ. ಅವರನ್ನು ಸಂತೈಸಲು ಯಾರಿಂದಲೂ ಆಗುತ್ತಿಲ್ಲ ಎಂದು ಎನ್.ಎಂ. ಸುರೇಶ್ ಹೇಳಿದರು.