ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಗೆ ಜನರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕನಕಪುರ ತಾಲ್ಲೂಕಿನ ಸಂಗಮ ಬಳಿಯ ಮಡಿವಾಳ ಬಳಿ ಭಾನುವಾರ ನಡೆದಿದೆ. ಗಾಯಾಳುಗಳನ್ನು ಕನಪುರದ ಐಪಿಪಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಕೆಲವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.
ತಗಡೇಗೌಡನದೊಡ್ಡಿ ಗ್ರಾಮದ ಜೋಡಿಯ ಮದುವೆ ಸಮಾರಂಭವನ್ನು ಸಂಗಮ ಬಳಿ ಇರುವ ಮಡಿವಾಳದಲ್ಲಿ ಆಯೋಜಿಸಲಾಗಿತ್ತು. ಎರಡು ಖಾಸಗಿ ಬಸ್ಸಿನಲ್ಲಿ ಜನರು ತೆರಳುತ್ತಿದ್ದರು. ಈ ಪೈಕಿ ಒಂದು ಬಸ್ ಸಂಗಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.