ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಶ್ರೀರಾಮನ ಭಕ್ತ, ಶ್ರೀರಾಮ ನಮ್ಮ ಮನೆ ದೇವರು. ನಾನು ಮುಡಾದಿಂದ ದಾಖಲೆ ತೆಗೆದುಕೊಂಡಿದ್ದೇನೆ ಎಂದು ಶ್ರೀರಾಮನ ಮೇಲೆ ಬಂದು ಪ್ರಮಾಣ ಮಾಡಲಿ ನೋಡೋಣ ಎಂದು ಸಚಿವ ಭೈರತಿ ಸುರೇಶ್ ಸವಾಲ್ ಹಾಕಿದ್ದಾರೆ.
ಕರ್ನಾಟಕದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಉಪಚುನಾವಣೆ, ಜಾತಿ ಜನಗಣತಿ, ಮೀಸಲಾತಿ ವಿಚಾರ ಸೇರಿ ಹಲವು ವಿಷಯಗಳ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಅದಕ್ಕೂ ಮುನ್ನ ಮಾಧ್ಯಮದ ಜೊತೆ ಸುರೇಶ್ ಮಾತನಾಡಿದ್ದಾರೆ.
ಮೈಸೂರಿನ ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಆಣೆ ಮಾಡುವಂತೆ ಸುರೇಶ್ ಸವಾಲ್ ಹಾಕಿದ್ದಾರೆ.