ವಿಜಯಪುರದಲ್ಲಿ ಭೂಮಿ ಕಂಪಿಸಿದ ಅನುಭವ, ಭಾರೀ ಶಬ್ದಕ್ಕೆ ಕಂಗಾಲಾದ ಜನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯಪುರ ಜಿಲ್ಲೆಯ ವಿವಿಧೆಡೆ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಕಳ್ಳಕವಟಗಿ, ಘೋಣಸಗಿ, ಹುಬನೂರ ಗ್ರಾಮಗಳಲ್ಲಿ ಭೂಕಂಪ ಸಂಭವಿಸಿದೆ. ಮಹಾರಾಷ್ಟ್ರ ಗಡಿ ಭಾಗದ ಮೊರಬಗಿ, ತಿಕ್ಕುಂಡಿ, ಆಸಂಗಿ ಗ್ರಾಮಗಳಲ್ಲೂ ಭೂಕಂಪ ಸಂಭವಿಸಿದೆ.

ಇಂದು ಬೆಳಗ್ಗೆ ಸುಮಾರು 11:29 ಗಂಟೆಗೆ ದೊಡ್ಡ ಶಬ್ದದೊಂದಿಗೆ ಭೂಕಂಪದ ಅನುಭವವಾಗಿದೆ. ಜೋರು ಶಬ್ದದಿಂದ ಹೆದರಿ ಜನರು ಮನೆಯಿಂದಾಚೆಗೆ ಓಡಿ ಬಂದಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!