ಗಿನ್ನಿಸ್ ದಾಖಲೆ ಬರೆದ ಅಮರಾವತಿ ಡ್ರೋನ್ ಸಮ್ಮೇಳನ: ಡ್ರೋನ್ ಪ್ರದರ್ಶನಕ್ಕೆ ಜನತೆ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

‘ಅಮರಾವತಿ ಡ್ರೋನ್ ಸಮ್ಮೇಳನ 2024′ ರಲ್ಲಿ 5,500 ಡ್ರೋನ್‌ಗಳಿಂದ ಲೈಟಿಂಗ್ಸ್ ಶೋ ನಡೆಸುವ ಮೂಲಕ 5 ಗಿನ್ನಿಸ್ ದಾಖಲೆ ನಿರ್ಮಿಸಲಾಗಿದೆ.

Imageಆಂಧ್ರಪ್ರದೇಶದ ಪೂರ್ಣಿಮಾ ಘಾಟ್‌ನ ಕೃಷ್ಣಾ ನದಿಯ ದಡದಲ್ಲಿ ನಡೆದ `ಅಮರಾವತಿ ಡ್ರೋನ್ ಸಮ್ಮೇಳನ 2024’ರಲ್ಲಿ 5,500 ಡ್ರೋನ್‌ಗಳನ್ನು ಹಾರಿಸಿ, ರಾಷ್ಟ್ರಧ್ವಜ, ಭಗವಾನ್ ಬುದ್ಧ ಹೀಗೆ ಹಲವಾರು ರೀತಿಯ ಆಕೃತ್ತಿಗಳನ್ನು ಆಕಾಶದಲ್ಲಿ ರಚಿಸಲಾಯಿತು.

Imageಡ್ರೋನ್ ಪ್ರದರ್ಶನದಲ್ಲಿ ಸೌರಮಂಡಲ, ಅತೀ ದೊಡ್ಡ ವೈಮಾನಿಕ ಲಾಂಛನ, ಅತೀ ದೊಡ್ಡ ಧ್ವಜ ಪ್ರದರ್ಶನ, ಅತೀ ದೊಡ್ಡ ವಿಮಾನದ ವಿನ್ಯಾಸ ಹಾಗೂ ಅತೀ ದೊಡ್ಡ ಭಾರತದ ಪ್ರಮುಖ ಮೈಲುಗಲ್ಲುಗಳನ್ನು ಪ್ರದರ್ಶಿಸಲಾಯಿತು. ಈ ಮೂಲಕ 5 ಗಿನ್ನಿಸ್ ದಾಖಲೆಗಳನ್ನು ನಿರ್ಮಿಸಲಾಯಿತು.

Imageಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸೇರಿದಂತೆ ಸಾವಿರಾರು ಜನರು ಭಾಗಿಯಾಗಿ, ಡ್ರೋನ್ ಪದರ್ಶನವನ್ನು ಕಣ್ತುಂಬಿಕೊಂಡರು.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಎನ್.ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದಲ್ಲಿ ಇದೊಂದು ಡ್ರೋನ್ ಮುಸ್ಸಂಜೆಯಾಗಿದೆ. ಅದ್ಭುತ ಡ್ರೋನ್ ಪ್ರದರ್ಶನದ ಮೂಲಕ ನಿರ್ಮಾಣಗೊಂಡ 5 ಗಿನ್ನಿಸ್ ವಿಶ್ವ ದಾಖಲೆಗಳನ್ನು ವೀಕ್ಷಿಸಿದ್ದೇನೆ. ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಿದ್ದಕ್ಕಾಗಿ ನಾನು ಎಲ್ಲಾ ಸಂಘಟಕರು ಮತ್ತು ಭಾಗವಹಿಸುವವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.

Image

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!