ಹೊಸದಿಗಂತ ವರದಿ, ಕಾರ್ಕಳ :
ಉಡುಪಿ ಜಿಲ್ಲೆಯ ಕಾರ್ಕಳದ ಬೈಪಾಸ್ ಬಳಿ ಗುರುವಾರ ಬೆಳಿಗ್ಗೆ ಪುಲ್ಕೆರಿ ಅಲ್ ಬರೆರಾ ಇಂಟರ್ ನ್ಯಾಷನಲ್ ಶಾಲಾ ಮಕ್ಕಳು ಹೋಗುತಿದ್ದ ಸ್ಕೂಲ್ ಬಸ್ ಹೈದ್ದಾರಿ ಬಳಿಯ ಚರಂಡಿಗೆ ವಾಲಿದ ಘಟನೆ ನಡೆದಿದೆ.
ಅದೃಷ್ಟವಶಾತ್ ಪುಟ್ಟ ಮಕ್ಕಳಿಗೆ ಯಾವುದೇ ಹಾನಿ ಸಂಭವಿಸಿಲ್ಲ.
ಹೈದ್ದಾರಿ ಬಳಿಯ ರಸ್ತೆ ಕಾಮಗಾರಿ ಅವ್ಯವಸ್ಥೆಯಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯರಾದ ರಾಜೇಶ್ ಕೋಟ್ಯಾನ್ ಹಾಗೂ ಗ್ಯಾರೇಜ್ ಮಾಲೀಕ ಅಬ್ದುಲ್ ನೇತೃತ್ವದಲ್ಲಿ ಸ್ಥಳೀಯರು ಮಕ್ಕಳನ್ನು ರಕ್ಷಸಿ ಬಸ್ ಮೇಲೆತ್ತಿದರು.