ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್, 10 ನೇ ಬಾರಿಗೆ ಮತ ಕೇಳಲು ಜನರ ಮುಂದೆ ನಿಂತಿದ್ದೇನೆ, ಐದು ಬಾರಿ ಗೆದ್ದಿದ್ದೇನೆ.
ಸ್ವಾರ್ಥಿ ರಾಜಕಾರಣಿಗಳನ್ನು ಕ್ಷೇತ್ರದಿಂದ ದೂರವಿಟ್ಟು ಜನಸೇವೆ ಮಾಡಲು ಪುನಃ ಕಾಂಗ್ರೆಸ್ ಸೇರಿರುವ ನನ್ನನ್ನು ಚನ್ನಪಟ್ಟಣ ಮತದಾರರು ಬೆಂಬಲಿಸಲಿದ್ದಾರೆ ಎಂದು ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.